ಚಂಡರಕಿ ಸಾಂಸ್ಕøತಿಕ ಕಲಾ ಸಂಸ್ಥೆಯಲ್ಲಿ ಅಕ್ಕಮಹಾದೇವಿ ಜಯಂತಿ
ಗುರುಮಠಕಲ್ :ಏ.24: ಇಡೀ ತಮ್ಮ ಬದುಕನ್ನು ಹೋರಾಟದಲ್ಲಿ ಕೊನೆಗಾಣಿಸಿ ಸಾಹಿತ್ಯ ರಚನೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದ ಶಿವಶರಣೆ. ಮಹಾಜ್ಞಾನಿ ವೈರಾಗ್ಯನಿಧಿ ಅಲ್ಲಮಪ್ರಭುಗಳಂತವರದಿಂದ ಸನ್ಮಾನಿತಳಾದವಳು ವಚನ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಗಳನ್ನು ಕೊಟ್ಟು ಕನ್ನಡದ ಪ್ರಥಮ ಕವಿಯತ್ರಿಯಾದವಳು ಅಕ್ಕಮಹಾದೇವಿ .
ತಾಲೂಕಿನ ಸಮಿಪದ ಚಂಡರಕಿ ಗ್ರಾಮದ “ಗಾನಯೋಗಿ ಡಾಕ್ಟರ್ ಪಂಡಿತ ಪುಟ್ಟರಾಜ ಸಂಗೀತ ಸಾಹಿತ್ಯ ನಿರಂತರ ಸಾಂಸ್ಕೃತಿಕ ಕಲಾ ಸಂಸ್ಥೆ” ಯಲ್ಲಿ ಅಕ್ಕಮಹಾದೇವಿಯವರ ಜಯಂತಿ ಆಚರಣೆಯ ಸಮಯದಲ್ಲಿ ಮಾತನಾಡಿದ ಪತ್ರಕರ್ತ ರಾಜಲಿಂಗಪ್ಪ ಸಜ್ಜನ್ ಚಂಡರಕಿ ಅವರು ಮಾತನಾಡಿ, ಬಳ್ಳಿಗಾವೆ ಸಮೀಪದ ಉಡುತಡಿ ಗ್ರಾಮದ ನಿರ್ಮಲ ಶೆಟ್ಟಿ ಮತ್ತು ಸುಮತಿ ಎಂಬ ಶಿವಶರಣ ದಂಪತಿಗಳಿಗೆ ಪುತ್ರಿಯಾಗಿ ಜನಿಸಿದಳು. ಲೌಕಿಕದ ಕಾಮ ವಾಸನೆ ಯನ್ನು ಗೆದ್ದು ಪರಮಾರ್ಥದ ಶರಣ ಮಾರ್ಗವನ್ನು ತೋರಿದ ಅಪ್ಪ ಬಸವಣ್ಣ ನವರನ್ನು ಹೃದಯ ತುಂಬಿ ಸ್ಮರಿಸಿದ ಮಹಾ ಸಾದ್ವಿ ಅಕ್ಕ ಮಹಾದೇವಿ ಎಂದು ತಿಳಿಸಿದರು ಈ ವೇಳೆ ಶಿವಕುಮಾರ ಸಜ್ಜನ್,ನವಿನ್ ,ಉದಯ ಕುಮಾರ್ ಹಾಗೂ ಗ್ರಂಥಾಪಾಲಕರಾದ ಪಿ. ಬೀಮಶಪ್ಪ ಚಂಡರಕಿ, ವಿಧ್ಯಾರ್ಥಿಗಳು ಇದ್ದು ಸಂಗೀತ ಕಾರ್ಯಕ್ರಮ ಜೊತೆಗೆ ಪ್ರಸಾದ ಸ್ವೀಕರಿಸಿದರು.