ಲಾಧಾ ಗ್ರಾಮದಲ್ಲಿ ಹನುಮ ಜನ್ಮೋತ್ಸವ
ಔರಾದ್ :ಏ.24: ಚೈತ್ರ ಮಾಸ ಶುಕ್ಲ ಪಕ್ಷದ ಹುಣ್ಣಿಮೆ ತಿಥಿ ಮಂಗಳವಾರ ಹನುಮ ಜನ್ಮೋತ್ಸವ ನಿಮಿತ್ತ ಬೆಳಿಗ್ಗೆ ಲಾಧಾ ಗ್ರಾಮದ ಹನುಮಾನ ಮಂದಿರದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದ ಹನುಮ ಜನ್ಮೋತ್ಸವ ಆಚರಣೆ ಮಾಡಿದರು.
ಹನುಮ ಜನ್ಮೋತ್ಸವ ನಿಮಿತ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ಏರ್ಪಡಿಸಿದ್ದ ಗ್ರಾಮಸ್ಥರು ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮುಂತಾದ ಧಾರ್ಮಿಕ ಕಾರ್ಯಗಳ ನಂತರ ಮಾತೆಯರಿಂದ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಲಾಯಿತು. ಭಜನೆ, ನಾಮಸಂಕೀರ್ತನೆ ಮುಗಿದ ಬಳಿಕ ಮಹಾಪೂಜೆ ನೆರವೇರಿಸಿದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಲಿಂಗ ಸ್ವಾಮಿ, ಪ್ರಮುಖರಾದ ಭರತ್ ದದ್ದಾಪೂರೆ, ಕಲ್ಲಪ್ಪ ಬಾವಗೆ, ನಾಗಶೆಟ್ಟಿ ಗಾದಗೆ, ಮಾಣಿಕರಾವ ಜನವಾಡೆ, ಶರಣಪ್ಪ ಬಾವಗೆ ಸೇರಿದಂತೆ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.