ಸಡಗರ ಸಂಭ್ರಮದಿಂದ ಜರುಗಿದ ಹನುಮಾನ ಜಯಂತಿ
ಹುಮನಾಬಾದ್:ಏ.24:ಸೀತಾ ರಾಮ ಕಲ್ಯಾಣ ಉತ್ಸವ ಮೂಲಕ ಹನುಮ ಜಯಂತಿಯ ಅಖಂಡ ಮಹಾರುದ್ರಾಭಿಷೇಕ ಪೂಜೆ ಹಾಗೂ ಹನುಮನು ವಿಶೇಷ ಅಲಂಕಾರದೊಂದಿಗೆ ಸೀತಾ ರಾಮ ಕಲ್ಯಾಣ ಉತ್ಸವ ಮೂಲಕ ಸಂಪ್ನಗೊಂಡಿತು.
ಪಟ್ಟಣದ ಹೋರವಲಯದ ಬೈರಾಗಿ ಮಠ ಹನುಮಾನ ದೇವಸ್ಥಾನದಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಚನ್ನಮ್ಮಾ ಬಸಯ್ಯಾ ಸ್ವಾಮಿ ಹುಡಗಿ ಇವರ ಸಯುಕ್ತಾಶ್ರಯದಲ್ಲಿ ಕಳೆದ ಮೂರುದಿನಗಳಿಂದ ಸತತವಾಗಿ ನಡೆಯುತ್ತಿರುವ ಹನುಮಾನ ಅಖಂಡ ಮಹಾರುದ್ರಾಭಿಷೇಕ ಪೂಜೆ ಗಣ ಹೊಮದೊಂದಿಗೆ ಹುಡಗಿ ಗ್ರಾಮದ ಹಿರೇಮಠ ಸಂಸ್ಥಾನದ ಶ್ರೀ. ವಿರುಪಾಕ್ಷ ಶಿವಾಚಾರ್ಯ, ಹುಮನಾಬಾದ ಹಿರೇಮಠ ಸಂಸ್ಥಾನದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ, ಹೂಣಕಿರಣಗಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಗುಂಡ ಶಿವಾಚಾರ್ಯ ಹಾಗೂ ಖೇಳಗಿ ಶ್ರೀಗಳ ಅವರ ಸಾನಿಧ್ಯದಲ್ಲಿ ಸಂಪ್ನಗೊಂಡಿತು.
ಬೆಳಿಗ್ಗಿನ ಜಾವ ಪಂಚಮುಖಿ ಹನುಮಂತನಿಗೆ ಪಂಚಾಮೃತ ಅಭಿಷೇಕ, ನೈವಿದ್ಯೆ, ಮಹಿಳೆಯರಿಂದ ತೋಟಿಲು ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಬಳಿಕ ಕಲಬುರ್ಗಿ ಜಿಲ್ಲೆಯ ಹೋಣಕಿರಣಗಿ ಹಿರೇಮಠದ ಶ್ರೀ ರಾಚೋಟೇಶ್ವರ ವೈದಿಕಿಯ ಬಳಗದಿಂದ ಗಣಹೋಮ್, ಶನೇಶ್ವರ ಹೋಮ್, ಸೀತಾ ರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಿದವು. ಪಂಚಮುಖಿ ಹನುಮನ ದೇವರ ಮೂರ್ತಿಗೆ ನಾನಾ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಬೆಳಗ್ಗೆಯಿಂದಲೇ ಭಕ್ತರು ಶ್ರದ್ಧಾಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತು ಶ್ರೀರಾಮದೂತ ಹನುಮನ ನಾಮಸ್ಮರಣೆ ಮಾಡಿದ್ದಲ್ಲದೆ ವಿಶೇಷ ಪೂಜೆಸಲ್ಲಿಸಿ ಭಕ್ತಿಭಾವ ಅರ್ಪಿಸುವ ಮುಲಕ ದೇವರ ದರ್ಶನ ಪಡೆದು ಪುನೀತರಾದರು. ಬಂದ ಭಕ್ತರಿಗೆ ಸಿಹಿಪಾನಕ, ಮಜ್ಜಿಗೆ, ಅನ್ನ ಸಾಂಬಾರು, ಬದನೆಕಾಯಿ ಪಲ್ಲೆ ಪ್ರಸಾದವನ್ನು ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ದೇವಾನಂದ ಘವಾಳಕರ, ಉಪಾಧ್ಯಕ್ಷ ಚಂದ್ರಕಾಮತ ನಿಶಾನದಾರ, ಸಂತೋಷ ಜಾಧವ, ನೀತಿನ ಘವಾಳಕ, ಸಂದೀಪ ನಿಶಾನದಾರ, ಆನಂದ ತೇಲಂಗ, ಓಂಕಾರ ನಾಗರೆ, ಶುಭಂ ತುಗೈ, ಕರಬಸಯ್ಯಾ ಸ್ವಾಮಿ ಹುಡಗಿ ಹಾಗೂ ಪತ್ನಿ, ರಾಚೊಟೇಶ್ವರ ವೈದಿಕ ಬಳಗದ ವಿರೇಶ ಶಾಸ್ತಿ, ಶರಣಯ್ಯಾ ಕೋಡ್ಲಿ, ಪ್ರಶಾಂತ ಜೇವರ್ಗಿ, ರೇವಣಸಿದ್ದಯ್ಯಾ ಕೋಡ್ಲಿ, ಆನಂದಯ್ಯಾ ಕಾಪನೂರ ಸೇರಿದಂತೆ ಅನೇಕರಿದ್ದರು.