ರಾಹುಲ್ ಗಾಂಧಿ ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ: ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.24: ಈ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಟಿತ ಕ್ಷೇತ್ರಗಳಾಗಿರುವ  ಬಳ್ಳಾರಿ, ಕೊಪ್ಪಳ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಚುನಾವಣಾ ಪ್ರಚಾರಕ್ಕೆ ಪಕ್ಷದ ವರಿಷ್ಟರಾದ ರಾಹುಲ್ ಗಾಂಧಿ ಅವರು ಏ.26 ರಂದು ಸಂಜೆ 4 ವರೆಗೆ ಆಗಮಿಲಿದ್ದಾರೆ. ಈ ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನತೆ ಪಾಲ್ಗೊಳ್ಳಲಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು. ಅಲ್ಲಿ ವೇದಿಕೆ ನಿರ್ಮಾಣ ಮಾಡಲು ಇಂದು ಅಭ್ಯರ್ಥಿ ಇ.ತುಕರಾಂ, ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್, ನಗರ ಶಾಸಕ ಭರತ್ ರೆಡ್ಡಿ, ಬುಡಾ ಅಧ್ಯಕ್ಷ ಜೆ.ಎಸ್.ಅಸಂಜನೇಯಲು ಮೊದಲಾದವರೊಂದಿಗೆ ಪೂಜೆ ನೆರವೇರಿಸಿ. ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಸಮಾವೇಶಕ್ಕೆ ರಾಹುಲ್ ಅವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿಕೆಸಿ, ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಪಂಚ ಗ್ಯಾರೆಂಟಿಗಳ ಜೊತೆಗೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ  25 ಗ್ಯಾರೆಂಟಿ ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ
ಕೋಮುವಾದಿ,  ದುರಾಡಳಿತದ ಪಕ್ಷ ಬಿಜೆಪಿಗೆ ಪಾಠ ಕಲಿಸಲು ಮತದಾರ ಕಾತುರದಿಂದ ಕಾಯುತ್ತಿದ್ದಾರೆ. ಉತ್ತರ ಕರ್ನಾಟಕದ ಅಭ್ಯರ್ಥಿಗಳ ಗೆಲುವಿಗಾಗಿ ರಾಹುಲ್ ಗಾಂಧಿ ಅವರು ಈ ಬಹಿರಂಗ ಪ್ರಚಾರದ ಸಮಾವೇಶಕ್ಕೆ ಬರಲಿದ್ದಾರೆಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್.ಅಂಜನೇಯಲು, ವಿಧಾನ ಪರಿಷತ್ ಮಾಜಿ ಸದಸ್ಯ ಕೆಎಸ್ ಎಲ್ ಸ್ವಾಮಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಹೆಚ್.ತಿಮ್ಮನಗೌಡ,  ಮೇಯರ್ ಶ್ವೇತಾ ಸೋಮಶೇಖರ್, ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಮುಖಂಡರಾದ  ರಾಂಪ್ರಸಾದ್, ಕಲ್ಕಂಬ ಪಂಪಾಪತಿ, ಹುಮಾಯೂನ್ ಖಾನ್ ಮೂದಲಾದವರು ಇದ್ದರು.
ಜೀನ್ಸ್ ಪಾರ್ಕ್ ಗೆ
ಡಿಪಿಆರ್ ಆಗುತ್ತಿದೆ.
ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದ ಜೀನ್ಸ್ ಪಾರ್ಕ್ ಎಲ್ಲಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ ಅವರು. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಪಕ್ಷ ಮತ್ತು ನಾಯಕರ ನಡೆಯಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ  ಜೀನ್ಸ್ ಪಾರ್ಕ್ ಆಗುವುದು ಶತಸಿದ್ದ.
ಈಗಾಗಾಲೇ ಜೀನ್ಸ್ ಪಾರ್ಕ್ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಡಿಪಿಆರ್ ಮಾಡಲು ಸೂಚಿಸಿದೆ. ಎಷ್ಟು ಜನ‌ ಕಾರ್ಮಿಕರು, ಅವರಿಗೆ ತರಬೇತಿ, ಪೂರಕ ಉತ್ಪಾದನೆ ಘಟಕಗಳ ಸ್ಥಾಪನೆ ಕುರಿತು 
ಎಸ್ ಪಿ ವಿ ರಚನೆ ಮಾಡಲಾಗುತ್ತಿದೆ.
ಬಳ್ಳಾರಿ ಜೀನ್ಸ್  ದೇಶಕ್ಕೆ ಅಷ್ಅಏ ಅಲ್ಲದೆ ವಿಶ್ವಕ್ಕೆ ಮಾಡೆಲ್ ಮಾಡುವ ಉದ್ದೇಶವಿದೆಂದರು.