ಎಸ್.ಯು.ಸಿ.ಐ  ಕಮ್ಯುನಿಸ್ಟ್ ಪಕ್ಷದ 74ನೇ ಸಂಸ್ಥಾಪನಾ ದಿನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.24: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ 77ನೇ ಸಂಸ್ಥಾಪನಾ ದಿನವನ್ನು ಪಕ್ಷದ ಜಿಲ್ಲಾಕಛೇರಿಯಲ್ಲಿಂದು ಆಚರಿಸಲಾಯಿತು. ಎಸ್.ಯು.ಸಿ.ಐ  ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಾದ ಕಾಮ್ರೇಡ್ಶಿವದಾಸ್ ಘೋಷ್ ರವರ ಭಾವಚಿತ್ರಕ್ಕೆ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್‍ಡಿ.ನಾಗಲಕ್ಷ್ಮಿಅವರು ಮಾಲಾರ್ಪಣೆ ಮಾಡಿದರು.ಅದ್ಯಕ್ಷತೆಜಿಲ್ಲಾ ಸಮಿತಿ ಸದಸ್ಯರಾದ ಡಾ.ಪ್ರಮೋದ್.ಎನ್ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಾಮ್ರೇಡ್ ಡಿ.ನಾಗಲಕ್ಷ್ಮಿಮಾತನಾಡುತ್ತಾ “ಇಂದುಕೇವಲ ಶೇ 1% ಭಾರತೀಯರು ದೇಶದ 73% ಸಂಪತ್ತಿನ ಒಡೆಯರಾಗಿದ್ದಾರೆ! ನಮ್ಮದೇಶದ ಅಧಿಕಾರವನ್ನು ಈ ದೇಶದ ಬೆರಳೆಣಿಕೆಯ ಬಂಡವಾಳಶಾಹಿಗಳು ಮತ್ತುಅವರ ನಿಷ್ಠಾವಂತ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್, ಇತರೆ ಪಕ್ಷಗಳು ಹಾಗೂಅಧಿಕಾರಿಗಳು ಮಾತ್ರ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು”ಎಂದರು., “ಸ್ವಾತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿಹೋರಾಟಗಾರರಾಗಿದ್ದ, ಈ ಯುಗದ ಮಹಾನ್ ಮಾಕ್ರ್ಸ್‍ವಾದಿ ಚಿಂತಕರಾದ ಕಾ|| ಶಿವದಾಸ್‍ಘೋಷ್‍ರವರು, ಬ್ರಿಟಿಷರು ಸ್ವಾತಂತ್ರ್ಯ ನೀಡುವುದು ಅಂದರೆ, ಈ ದೇಶದಬಂಡವಾಳಶಾಹಿಗಳಿಗೆ ಅಧಿಕಾರ ಹಸ್ತಾಂತರ ಎಂದು ಮನಗಂಡರು. ಈಸ್ವಾತಂತ್ರ್ಯವು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹಿಸುವ ದಿಕ್ಕಿನಲ್ಲಿಲ್ಲವೆಂದುಅರಿತರು. ಹಾಗೆಯೇ, ಬರೀ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದಲ್ಲದೇಕಾರ್ಮಿಕರನ್ನು ಮತ್ತು ರೈತರನ್ನು ಸಂಘಟಿಸಿ ಸಮಾಜವಾದಿ ಕ್ರಾಂತಿಯನ್ನುನೆರವೇರಿಸಬೇಕು. ಇಲ್ಲದಿದ್ದರೆ, ನಮ್ಮ ಸ್ವಾತಂತ್ರ ‘ಅರೆ ಬೆಂದ’ ಸ್ವಾತಂತ್ರವಾಗುತ್ತದೆಎಂದು ಅಂದಿನ ಕಮ್ಯುನಿಷ್ಟ್ ಪಕ್ಷದ ನಾಯಕರಿಗೂ ಕೂಡ ಎಚ್ಚರಿಸಿದ್ದರು. ಅಂದಿನನಾಮಾಂಕಿತ ಕಮ್ಯೂನಿಸ್ಟ್ ಪಕ್ಷದ ನಾಯಕರು ಸಹ ಅವರ ಎಚ್ಚರಿಕೆಯನ್ನುಅಸಡ್ಡೆಯಿಂದ ತಿರಸ್ಕರಿಸಿದರು” ಆ ಪಕ್ಷದ ತಪ್ಪು ರಾಜಕೀಯ ದಾರಿ, ನಿಲುವುಗಳುಹಾಗೂ ನಾಯಕರ ಹಾಗೂ ಕಾರ್ಯಕರ್ತರ ವೈಯಕ್ತಿಕ ಜೀವನ, ನಡೆ-ನುಡಿಗಳನ್ನು ಆಳವಾಗಿ ಅಭ್ಯಾಸ ಮಾಡಿದ ಕಾ.ಶಿವದಾಸ್ ಘೋಷ್ ಅದೊಂದು ನೈಜಕಮ್ಯುನಿಷ್ಟ್ ಪಕ್ಷವಲ್ಲ ಬದಲಿಗೆ ಪೆಟ್ಟಿ-ಬೂಜ್ರ್ವ ಪಕ್ಷವೆಂದು ತೀರ್ಮಾನಿಸಿದರು.ಪ್ರತಿಕೂಲ ಪರಿಸ್ಥಿತಿಗಳಿಂದ ಎಳ್ಳಷ್ಟು ಎದೆಗುಂದದೆ ಕಾ|| ಶಿವದಾಸ್ ಘೋಷ್‍ರವರುಭಾರತದ ದುಡಿಯುವ ಜನತೆಯನ್ನು ಬಂಡವಾಳಶಾಹಿ ಶೋಷಣೆಯಿಂದವಿಮುಕ್ತಿಗೊಳಿಸಲು ತಮ್ಮ ಜೊತೆಗಿದ್ದ ಕೆಲವೇ ಸಹಯೋಧರೊಂದಿಗೆ, ಲೆನಿನ್‍ವಾದಿಮಾದರಿಯ ಒಂದು ನೈಜ ಅಕೃತ್ರಿಮ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಲುತೀರ್ಮಾನಿಸಿದರು. ಈ ಮೂಲಕ ನಮ್ಮ ದೇಶದ ನಿರ್ದಿಷ್ಟ ಪರಿಸ್ಥಿತಿಗೆ ಸರಿಹೊಂದುವಂತೆಮಾಕ್ರ್ಸ್‍ವಾದವನ್ನು ಅಳವಡಿಸಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಬುನಾದಿಹಾಕಿದರು. ಅದರಂತೆಯೇ 1948ರ ಏಪ್ರಿಲ್ 24ರಂದು ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಶ್ಚಿಮ ಬಂಗಾಳದಲ್ಲಿ ಜನ್ಮತಾಳಿತು. ಇಂದು ಈ ಪಕ್ಷಬೃಹದಾಕಾರವಾಗಿ ಬೆಳೆದು ನಿಂತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಜನರ ಸದಸ್ಯತ್ವ ಹೊಂದಿದೆ ಮತ್ತು ಲಕ್ಷಾಂತರಬೆಂಬಲಿಗರನ್ನು ಪಡೆದುಕೊಂಡಿದೆ. ಹೀಗಾಗಿ, ಪ್ರತಿ ವರ್ಷ ಏಪ್ರಿಲ್ 24ರಂದು, ಈ ದೇಶದಲ್ಲಿಸಮಾಜವಾದಿ ಕ್ರಾಂತಿಯ ಮೂಲಕ ಶೋಷಿತ ಜನತೆಯನ್ನು ಬಂಡವಾಳಶಾಹಿಗಳಶೋಷಣೆಯಿಂದ ಮುಕ್ತಗೊಳಿಸುವ ಸಂಕಲ್ಪ ತೊಡುವ ದಿನವಾಗಬೇಕಾಗಿದೆ..ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸುವುದು ಒಂದು ಸಂಪ್ರದಾಯವಲ್ಲ, ಬದಲಿಗೆ,ಶಿವದಾಸ್ ಘೋಷ್‍ರವರ ಚಿಂತನೆಗಳ ಆಧಾರದ ಮೇಲೆ ನಮ್ಮಲ್ಲಿರುವನ್ಯೂನತೆಗ¼ನ್ನು ಸರಿಪಡಿಸಿಕೊಂಡು, ಕ್ರಾಂತಿಕಾರಿ ಹೋರಾಟದಲ್ಲಿ ನಮ್ಮನ್ನು ನಾವುಹೆಚ್ಚು ತೊಡಗಿಸಿಕೊಳ್ಳಲು ಸಂಕಲ್ಪ ತೊಡುವ ದಿನವಾಗಬೇಕು” ಎಂದು ಹೇಳಿದರು.
ಈ ಸಂzದರ್ಭದಲ್ಲಿ  ಜಿಲ್ಲಾ ಸಮಿತಿ ಸದಸ್ಯರಾದ ಎ.ಶಾಂತಾ, ಸದಸ್ಯರಾದ ಈಶ್ವರಿ, ರವಿಕಿರಣ್, ಅನುಪಮಾ, ನಿಹಾರಿಕಾ, ಉಮಾ ಮುಂತಾದವರು ಉಪಸ್ಥಿತರಿದ್ದರುಸಭೆಯಲ್ಲಿಭಾಗವಹಿಸಿದ್ದರು.