ಉದಾಸೀನ ಬೇಡ, ಮತದಾನ ಮಾಡಿ: ಚಿಂತಕ ಮುಕುಂದನ್
ಸಂಜೆವಾಣಿ ನ್ಯೂಸ್
ಮೈಸೂರು: ಏ.24:- ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ. ಚುನಾವಣೆ ಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತ ಹಾಕುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಆಧ್ಯಾತ್ಮಿಕ ಚಿಂತಕ ಕೆ ಎಸ್ ಮುಕುಂದನ್ ಅವರು ಮನವಿ ಮಾಡಿದರು.
ಟೀಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
‘ರಾಜಕಾರಣಿಗಳು ಸರಿಯಿಲ್ಲ’ ಅನ್ನುವುದಕ್ಕಿಂತ ನಮ್ಮ ಮತವನ್ನು ಒಳ್ಳೆಯ ಮತ್ತು ಸೂಕ್ತ ಅಭ್ಯರ್ಥಿಗೆ ಚಲಾಯಿಸಬೇಕು. ಆಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮತದಾನ ನಮ್ಮ ಹಕ್ಕು. ಅದನ್ನು ಪ್ರತಿಯೊಬ್ಬರೂ
ಚಲಾಯಿಸಬೇಕು’ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ, ಚುನಾವಣೆ ದಿನ ಏನೇ ಕೆಲಸವಿರಲಿ, ಪ್ರತಿಯೊಬ್ಬರೂ ದೇಶದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಿ’ಮತದಾನ ಹಕ್ಕು ಮಾತ್ರವಲ್ಲ; ಜವಾಬ್ದಾರಿ ಕೂಡ ಹೌದು. ಮತದಾನದ ದಿನ ರಜೆ ಕೊಡುವುದು ಮೋಜು ಮಸ್ತಿ ಮಾಡಲ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ, ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡಲು ಪ್ರತಿಯೊಬ್ಬರೂ ಮತದಾನದ ದಿನ ಮತ ಚಲಾಯಿಸಬೇಕು ಎಂದು ಕರೆ ನೀಡಿದರು
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್, ಆಧ್ಯಾತ್ಮಿಕ ಚಿಂತಕ ಕೆ.ಎಸ್ ಮುಕುಂದನ್, ಹಿರಿಯ ನ್ಯಾಯವಾದಿ ಕೆ.ಆರ್ ಶಿವಶಂಕರ್, ರಮಣಶ್ರೀ ಕೇಂದ್ರದ ಅಂತರರಾಷ್ಟ್ರೀಯ ಯೋಗ ಪಟು ವಿಜಯ್ ಗೋಪಾಲ್, ಹೊಯ್ಸಳ ಕರ್ನಾಟಕದ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಮಾ ವಿ ರಾಮ್ ಪ್ರಸಾದ್, ಎಂಐಟಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮುರಳಿ, ಜಿಎಸ್‍ಎಸ್ ಶಿಕ್ಷಣ ಸಂಸ್ಥೆಯ ವನಜ ಪಂಡಿತ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಪ್ರ ಮುಖಂಡರಾದ ಎಂ ಆರ್ ಬಾಲಕೃಷ್ಣ, ಹರೀಶ್, ಸುಚಿಂದ್ರ, ಹಾಗೂ ಇನ್ನಿತರ ವಿಪ್ರ ಮುಖಂಡರು ಹಾಜರಿದ್ದರು