ಅಭಿವೃದ್ದಿಗೆ ರಕ್ಷಾರಾಮಯ್ಯನವರಿಗೆ ಮತ ನೀಡಿ: ಚಂದ್ರೇಗೌಡ
ಹೊಸಕೋಟೆ.ಏ.೨೪- ಚಿಕ್ಕಬಳ್ಳಾಪುರ ಲೋಕಸಭಾ ಕ್ಞೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯನವರಿಗೆ ಮತ ನೀಡಿ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಹೆಚ್.ಎಂ, ಚಂದ್ರೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಕ್ಷಾರಾಮಯ್ಯನವರು, ವಿದ್ಯಾವಂತರಾಗಿದ್ದು ಹೊರ ದೇಶಗಳಲ್ಲಿ ಪದವಿ ಪಡೆದು ಯುವ ನಾಯಕರಾಗಿ ಹೊರ ಬಂದಿದ್ದಾರೆ. ಅವರಿಗೆ ಬಡ ಜನರ ನಾಡಿ ಮಿಡಿತ ಏನೆಂಬುದು ಚೆನ್ನಾಗಿ ತಿಳಿದಿದೆ ಆದ್ದರಿಂದ ರಕ್ಷಾರಾಮಯ್ಯನವರಿಗೆ ಮತ ನೀಡಿ ರಾಜ್ಯ, ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದರು.
ಇನ್ನು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರು ಸಹ ಹೊರ ದೇಶಗಳಲ್ಲಿ ಪದವಿ ಪಡೆದು ವಿದ್ಯಾವಂತರಾಗಿ ನಮ್ಮ ಹೊಸಕೋಟೆ ಕ್ಷೇತ್ರದ ಶಾಸಕರಾಗಿ ಬಂದು ಜನರ ಕಷ್ಟ ಸುಖಗಳಲ್ಲಿ ಬಾಗಿಯಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ದಿ ಶ್ರಮಿಸುತ್ತಿದ್ದಾರೆ. ಇವರಂತೆ ರಕ್ಷಾ ರಾಮಯ್ಯನವರು ಸಹ ಚುನಾವಣೆಯಲ್ಲಿ ಜಯಗಳಿಸಿ ಬಂದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಭಿವೃದ್ದಿ ಕಾಣುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ ಆದ್ದರಿಂದ ಮತದಾರರು ದಯಮಾಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯನವರಿಗೆ ಮನ ನೀಡಬೇಕು ಎಂದು ಮನವಿ ಮಾಡಿದರು,
ಬಳಿಕ ಜಿಲ್ಲಾ ಕಾರ್ಮಿಕ ವಿಭಾಗದ ಉಸ್ತುವಾರಿಗಳಾದ ಎಂ.ಯೋಗಾನಂದ್ ರವರು ಮಾತನಾಡಿ, ನಾವು ಈಗಾಗಲೆ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಾದ್ಯಂತ ಪತ್ರಿಕಾಗೋಷ್ಠಿಗಳನ್ನು ಮಾಡಿ ರಕ್ಷಾ ರಾಮಯ್ಯನವರಿಗೆ ಮತ ನೀಡುವಂತೆ ಮನವಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ವಿದ್ಯಾವಂತ ಹಾಗು ಗುಣವಂತರನ್ನು ಅಭ್ಯರ್ಥಿಯಾಗಿ ನೀಡಿದೆ, ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಲ್ಲಿ ರಕ್ಷಾರಾಮಯ್ಯನವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮೆಲರ ಮೇಲಿದೆ ಆದ್ದರಿಂದ ಪ್ರತಿಯೊಬ್ಬ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯನವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕಾರ್ಮಿಕ ವಿಭಾಗದ ಜಿಲ್ಲಾ ಉಸ್ಥುವಾರಿಗಳಾದ ಅರವಿಂದ್ ಮಾವಳ್ಳಿ. ದಾಸ ವಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ರವಿ, ಪ್ರಧಾನ ಕಾರ್ಯ ದರ್ಶಿ ಆನಂದ, ನಂದಗುಡಿ ಸೂಲಿಬೆಲೆ ಹೋಬಳಿ ಅಧ್ಯಕ್ಷರಾದ ಸಹದೇವ, ಜಡಿಗೇನಹಳ್ಳಿ ಉಪಾಧ್ಯಕ್ಷರಾದ ನರಸಿಂಹ ಮೂರ್ತಿ ಎನ್. ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ಟೌನ್ ಮತ್ತು ಕಸಬಾ ಹೋಬಳಿಯ ಅಧ್ಯಕ್ಷರಾದ ಸಿ.ಶಿವಪ್ಪ, ಅಸಂಘಟಿತ ಕಾರ್ಮಿಕ ಟೌನ್ ಮತ್ತು ಕಸಬಾ ಹೋಬಳಿ ಅಧ್ಯಕ್ಷರಾದ ದಂಡುಪಾಳ್ಯ ಗೋವಿಂದಪ್ಪ, ಸೇರಿದಂತೆ ಹಲವರು ಉಪಸ್ತಿತರಿದ್ದರು.