ಅಕ್ಕ ಮಹಾದೇವಿ ವೈರಾಗ್ಯನಿಧಿ : ದ್ರಾಕ್ಷಾಯಿಣಿ ಮಾತಾಜಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.24: ಅಕ್ಕಮಹಾದೇವಿ ಕನ್ನಡ ಮೊದಲ ಕವಿಯಿತ್ರಿ. ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳಿಂದ ಎಲ್ಲ ಶರಣರ ಮನಗೆದ್ದವಳು. ಆಧ್ಯಾತ್ಮಿಕ ಕ್ಷೇತ್ರದ ವೈರಾಗನಿಧಿಯಾಗಿದ್ದಳು ಎಂದು ಹೂವಿನ ಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಮಹಾಶಿವಶರಣೆ ಅಕ್ಕಮಹಾದೇವಿಯ ಜಯಂತ್ಯುತ್ಸವದ ಉದ್ಘಾಟಿನೆ ನೆರವೇರಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅನನ್ಯ. ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದರೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಮಹಿಳಾ ಕಾಲೇಜಿನ ಪೆÇ್ರ. ಯು.ಎನ್. ಕುಂಟೋಜಿ ಮಾತನಾಡಿ, ಮಹಿಳಿಯರಿಗೆ ಹಕ್ಕುಗಳೇ ಇಲ್ಲದ ಸಮಯದಲ್ಲಿ ಅಕ್ಕಮಹಾದೇವಿಯ ಅನುಭವ ಮಂಟಪದಲ್ಲಿ ಜ್ಞಾನದ ಸಾಮಥ್ರ್ಯ ಪ್ರತಿಪಾದಿಸಿ ಅಲ್ಲಮಪ್ರಭುದೇವರ ಪ್ಪಶ್ನೆಗಳಿಗೆ ಸಮಯೋಚಿತ ಉತ್ತರ ನೀಡಿದಳು. ಚನ್ನಮಲ್ಲಿಕಾರ್ಜುನನೇ ನನ್ನ ಪತಿ ಎಂದು ಲೋಕದ ಜನರಿಗೆ ತಿಳಿಸಿದಳು ಎಂದರು.
ಶರಣೆ ಅಕ್ಕಮಹಾದೇವಿಯ ಆಧ್ಯಾತ್ಮಿಕ ಒಲವುಗಳು ಕುರಿತು ಉಪನ್ಯಾಸ ನೀಡಿದ ಸಾಹಿತಿ ಸುಖದೇವಿ ಅಲಬಾಳಮಠ ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಒಲವಿನಿಂದ ರೂಪಗೊಂಡು ತಂದೆ ತಾಯಿಯ ಸಂಸ್ಕಾರದ ಫಲವೆಂದು ಸದಾಕಾಲ ಶಿವಕಳೆಯಿಂದ, ರೂಪ ಲಾವಣ್ಯದಿಂದ ಕಂಗೋಳಿಸುತ್ತಿದ್ದಳು. ಕೌಶಿಕ ಅರಸ್ ಅಕ್ಕಮಹಾದೇವಿಯ ಸೌಂದರ್ಯಕ್ಕೆ ಮನಸೋತು ಅವಳನ್ನು ಮದುವೆ ಆಗಲು ಇಚ್ಚಿಸಿದಾಗ ನಿರಾಕರಿಸಿ ಚನ್ನಮಲ್ಲಿಕಾರ್ಜುನನ್ನು ನೆನೆಯುತ್ತಾ ಕಲ್ಯಾಣ ಕಡೆಗೆ ಹೆಜ್ಜೆ ಹಾಕಿದಳು ಎಂದರು.
ಶರಣ ಸಂಸ್ಕøತಿಯ ಚಿಂತಕ ಬಸವರಾಜ ಹಂಚಲಿ ಅನುಭವ ಮಂಟಪದÀಲ್ಲಿ ಶರಣೆ ಅಕ್ಕಮಹಾದೇವಿಯೊಂದಿಗೆ ಶರಣರ ಸಂವಾದ ಕುರಿತು ಮಾತನಾಡಿ, ಲೋಕದ ಜನರ ಮನಸ್ಸು ಮಲಿನ ಆಗಬಾರದೆಂದು ಆಕ್ಕಮಹಾದೇವಿ ಕೇಶವನ್ನೇ ವಸ್ತ್ರವನ್ನಾಗಿ ಮಾಡಿಕೊಂಡಳು. ಅವಳ ಮನಸ್ಸು ನಿರ್ಮಲದೊಂದಿಗೆ ಜ್ಞಾನದಲ್ಲಿ ಶಿವಶರಣೆಯರಗಿಂತ ಶ್ರೇಷ್ಠವಾಗಿದ್ದಳು. ಅನುಭವ ಮಂಟಪದಲ್ಲಿ ಶರಣೆ ಮಹಾದೇವಿಯನ್ನು ಅಕ್ಕಮಹಾದೇವ ಎಂದು ಕರೆಯಲು ಪ್ರಾರಂಭಿಸಿದರು ಎಂದರು.
ಇದೇ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹಳಕಟ್ಟಿ ಮಾತನಾಡಿದರು.
ಮಹೆತಾಬ ಕಾಗವಾಡ, ಶಾಂತಾ ವಿಭೂತಿ ಆಕ್ಕನ ವಚನಗಳನ್ನು ಹಾಡಿದರು. ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ ಪೂಜಾ ಅಂಗಡಿ ಚೈತ್ರಾವತಿ ನಿಲಪ್ಪನವರ. ಮಹಾಲಕ್ಷ್ಮಿ ಪೂಜಾರಿ ಮಹಿಳೆಯರ ಕುರಿತು ಹಾಡಿದರು.
ಸುರೇಶ ಜತ್ತಿ ಸ್ವಾಗತಿಸಿದರು. ಆನಂದ ಕುಂಬಾರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಬಾಳನಗೌಡ ಪಾಟೀಲ. ರಾಜೇಸಾಬ ಶಿವನಗುತ್ತಿ, ಕಮಲಾ ಮುರಾಳ. ಅಬ್ದುಲ್‍ರಜಾಕ ಮುಲ್ಲಾ, ಲತಾ ಗುಂಡಿ, ಗಂಗಮ್ಮ ರಡ್ಡಿ, ಜಿ.ಎಸ್. ಬಳ್ಳೂರ, ಎಫ್.ಜಿ. ಮುಲ್ಲಾ, ಎ.ಎಮ್. ಪಾಟೀಲ, ಎಸ್.ಆಯ್. ಬಿರಾದಾರ, ರಾಜೇಂದ್ರ ಬಿರಾದಾರ, ಅಹಮ್ಮದ ವಾಲಿಕಾರ, ಮಹಾದೇವಿ ತೆಲಗಿ, ಶಶಿಕಲಾ ನಾಯ್ಕೋಡಿ, ಸತ್ಯಪ್ಪ ಹಡಪದ, ಚನ್ನಾರಡ್ಡಿ ಕುಚನೂರ, ಜಯಶ್ರೀ ತೆಲಗ್ ಮುಂತಾದವರು ಉಪಸ್ಥಿತರಿದ್ದರು.