ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳು
ಕಲಬುರಗಿ: ಏ.23: ಮಳೆಗಾಲದ ನೀರಿನ ಮುಖಾಂತರ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಹರಡದಂತೆ ಕುಡಿಯುವ ನೀರಿನ ಮೂಲಗಳಾದ ಬೋರವೆಲ್, ಹ್ಯಾಂಡ್ ಪಂಪ್, ತೆರೆದ ಭಾವಿ ಮತ್ತು ಇನ್ನಿತರೆ ಜಲಮೂಲಗಳಲ್ಲಿ ಬಹಿರ್ದೆಸೆ ಮತ್ತು ಚರಂಡಿಗಳ ಕೊಳಚೆ ನೀರು ಸೇರ್ಪಡೆಗೊಂಡು ಕಲುಷಿತವಾಗುವ ಸಂಭವಗಳು ಹೆಚ್ಚಾಗಿರುವುದರಿಂದ ಸಂಬಂದಿಸಿದ ತಾಲ್ಲೂಕಿನ ಕಾರ್ಯನಿರ್ವಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ ಮತ್ತು ನೈರ್ಮಲ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಇಂತಹ ಪ್ರದೇಶಗಳಲ್ಲಿ ಸ್ವಚ್ಚತೆ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲು ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದ್ದಾರೆ.
ಬಯಲು ಬಹಿರ್ದೆಸೆ ಮತ್ತು ಚರಂಡಿ ಪ್ರದೇಶಗಳಲ್ಲಿನ ಮಳೆ ನೀರು ಕುಡಿಯುವ ನೀರಿನ ಮೂಲಗಳಲ್ಲಿ ಸೆರ್ಪಡೆಯಾಗದಂತೆ, ಅಂದರೆ ಬೋರವೆಲ್, ಹ್ಯಾಂಡ್ ಪಂಪ್, ತೆರೆದ ಭಾವಿ ಮತ್ತು ಇನ್ನಿತರೆ ಜಲ ಮೂಲಗಳ ಸುತ್ತಮುತ್ತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳುವುದು
ಗ್ರಾಮಗಳಲ್ಲಿನ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಚತೆ ಕಾರ್ಯಗಳನ್ನು ಕೈಗೊಳ್ಳುವುದು ಎಫ್ ಟಿ ಕೆ ಪರೀಕ್ಷೆಯನ್ನು ವಾರದಲ್ಲಿ 2-3 ಬಾರಿ ಕೈಗೊಳ್ಳುವುದು ಆರೋU್ಯÀ ಇಲಾಖೆ ವತಿಯಿಂದ ನೀರಿನ ಮೂಲಗಳ ಪರೀಕ್ಷೆಯನ್ನು ಕೈಗೊಂಡು ಪೀಡಿತ ಗ್ರಾಮಗಳು ಮತ್ತು ಕಲುಷಿತ ನೀರಿನ ಮೂಲಗಳÀನ್ನು ಮತ್ತೊಮ್ಮೆ ಆರೋಗ್ಯ ಇಲಾಖೆಯ ಆಶಾಕಾರ್ಯಕರ್ತೆಯರಿಂದ ಸ್ಯಾಂಪಲ್ ಮರು ಪರೀಕ್ಷೆ ಮಾಡುವುದು. ನೀರಿನ ಮೂಲಗಳ ಪರೀಕ್ಷೆಯಲ್ಲಿ ಮತ್ತೊಮ್ಮೆ ಪಾಸಿಟಿವ್ ವರದಿ ಬಂದಲ್ಲಿ (Bacterial Contamination Found) ವಿವರವಾದ ತಪಾಸಣೆಯನ್ನು (Detailed Auditing)ಕೈಗೊಳ್ಳುವುದು. ಅಂದರೆ, ಜಲಮೂಲದಿಂದ ಹಿಡಿದು ನೀರಿನ ಅಂತಿಮ ಉಪಯೋಗದ ವರೆಗೆ ಎಲ್ಲಾ ಹಂತಗಳಲ್ಲಿಯೂ ತಪಾಸಣೆಂiುÀನ್ನು ಕೈಗೊಳ್ಳುವುದು. ಆರೋU್ಯÀ ಇಲಾಖೆಯ ಸಿಬ್ಬಂದಿಗಳ ಮುಖಾಂತರ (ಆಶಾ) ಗ್ರಾಮದ ಬೇರೆ ಬೇರೆ ಸ್ಥಳಗಳಲ್ಲಿ ವಾರದಲ್ಲಿ 2 ಬಾರಿ ಕಡ್ಡಾಯವಾಗಿ ನೀರಿನ ಪರೀಕ್ಷೆಯನ್ನು ಕೈಗೊಳ್ಳುವುದು. ಎಂದು ಅವರು ಹೇಳಿದ್ದಾರೆ.
ಗ್ರಾ.ಕು.ನೀ ಮತ್ತು ನೈ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಹಂತದ ಪ್ರಯೋಗಾಲಯಗಳ ಮುಖಾಂತರ ನೀರಿನ ಪರೀಕ್ಷೆಯನ್ನು ಕೈಗೊಳ್ಳುವುದು ಪೈಪ ಲೈನ ಮುಖಾಂತರ ನೀರು ಸರಬರಾಜು ಮಾಡುವಲ್ಲಿ ನೀರು ಸೋರಿಕೆಯಾದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೋರಿಕೆಯಾಗದಂತೆ ಕ್ರಮ ವಹಿಸುವುದು. ಕಬ್ಬಿಣದ ¥ೈÉಪಗಳು ತುಕ್ಕು (Rust) ಹಿಡಿದ್ದಿದ್ದಲ್ಲಿ, ಅಂತಹ ಪೈಪUಳ Àನ್ನು ಬದಲಾಯಿಸಲು ಕ್ರಮ ವಹಿಸುವುದು.
ಎಲ್ಲಾ ಗ್ರಾಮಗಳಲ್ಲಿ ಕಟ್ಟುನಿಟ್ಟಾದ ಜಾಗೂರತೆಯನ್ನು ವಹಿಸುವುದು ಮತ್ತು ಯಾವುದೇ ಗ್ರಾಮಗಳಲ್ಲಿ ವಾಂತಿ, ಭೇದಿ, ಕಾಲರಾ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಂಬಂದಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾಲಯ ಘಟಕಕ್ಕೆ ವರದಿ ಸಲ್ಲಿಸುವುದು.
ಕಲುಷಿತ ಮತ್ತು ಕುಡಿಯಲು ಯೋಗ್ಯವಲ್ಲದ ನೀರಿನ ಮರು ತಪಾಸಣೆಗೆ ಒಳಪಡಿಸಿರುವ ಜಲಮೂಲಗಳ ವರದಿ ಪುನಃಪಾಸಿಟಿವ್ ಬಂದಲ್ಲಿ,ಅಂತಹ ಜಲಮೂಲಗಳ ವಿವರವಾದ ಪರಿಶೀಲನೆ(Detailed Auditing) ಯನ್ನು ಸಂಬಂದಿಸಿದ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಮತ್ತು ಗ್ರಾ.ಕು.ನೀ ಮತ್ತು ನೈ ಇಲಾಖೆಯ ಎ.ಇ.ಇ ರವರು, ಜಂಟಿಯಾಗಿ ಕೈಗೊಳ್ಳುವುದು, ಅಂದರೆ ಜಲಮೂಲದಿಂದ ಹಿಡಿದು ನೀರಿನ ಅಂತಿಮ ಉಪಯೋಗದ ವರೆಗೆ ಎಲ್ಲಾ ಹಂತಗಳಲ್ಲಿಯೂ ತಪಾಸಣೆಯನ್ನು ಕೈಗೊಳ್ಳುವುದು.(Source of Water, Over Head Tank, Valve,Pipeline Distribution, and Tap Water. Chlorination as Per Protocol issued by the Health Department.)ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾ.ಕು.ನೀ ಮತ್ತು ನೈ ಇಲಾಖೆ ರವರು ತಾಲ್ಲೂಕ ಪಂಚಾಯತಿಗಳ ಕಾಂiುರ್Àನಿರ್ವಾಹಕಅಧಿಕಾರಿಗಳ ಜೊತೆಯಲ್ಲಿ ಜಂಟಿಯಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳÀ (MVS) ಘಟಕಗಳ ತಪಾಸಣೆಯನ್ನು ಕೈಗೊಂಡು ಈ ಕೆಳಗಿನ ಪರೀಕ್ಷೆಗಳನ್ನು ಖುದ್ದಾಗಿ ಪರಿಶೀಲಿಸಿ ವರದಿ ನೀಡತಕ್ಕದ್ದು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ (MVS) ಘಟಕಗಳಲ್ಲಿನ ಸದ್ಯದ ನೀರಿನ ಲಭ್ಯತೆಯ ಬಗ್ಗೆ ಪರಿಶೀಲಿಸಿ ವರದಿ ನೀಡುವುದು. ಮುಂದಿನ 15-20 ದಿನಗಳಲ್ಲಿ ಬೇಕಾಗುವ ಅಂದಾಜು ನೀರಿನ ಬೇಡಿಕೆಯನ್ನು ಸಲ್ಲಿಸುವುದು ಆರೋU್ಯÀ ಇಲಾಖೆಗಳ ಮುಖಾಂತರ ನೀರಿನ H2S Vials ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುವುದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.