ಪದವಿ ಕಾಲೇಜಿಗೆ ಉಚಿತ ಪ್ರವೇಶ
ಕಲಬುರಗಿ,ಏ.23:ದ್ವಿತೀಯ ಪಿಯುಸಿ ಪಲಿತಾಂಶ ಬಂದಿದ್ದು ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಉಚಿತ ಪ್ರವೇಶ, ಉಚಿತ ಬಸ್ ಪಾಸ್ ಕಲ್ಪಿಸಿ ಅವರನ್ನು ದಾಖಲಿಸಿಕೊಳ್ಳಲಾಗುವುದು ಎಂದು ಗುರು ಸಾರ್ವಭೌಮ ಡಾ.ಶರಣು ಬಿ ಹೊನಗೆಜ್ಜೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಪಾಲಕರು ಪೆÇೀಷಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಪ್ರವೇಶದ ಕುರಿತು ಮಾತನಾಡಿದ ಅವರುಈಗಾಗಲೇ ಅನನ್ಯ ಕಾಲೇಜಿನ ವತಿಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಅತ್ಯುತ್ತಮವಾದ ಸರ್ಕಾರಿ ಹುದ್ದೆ ಅಲಂಕರಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನನ್ಯ ಪದವಿ ಮಹಾವಿದ್ಯಾಲಯ ವತಿಯಿಂದ ಪದವಿ ಸ್ನಾತಕೋತ್ತರ ಪದವಿ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಡಾ. ಶರಣು ತಿಳಿಸಿದ್ದಾರೆ.