ಧರ್ಮ-ಕಾನೂನು ಮನುಷ್ಯರನ್ನು ಬೆಸೆಯುವ ಕೊಂಡಿ
ಕಲಬುರಗಿ: ಏ.23:ಇಲ್ಲಿನಜೇವರ್ಗಿಕಾಲೊನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಸಂಜೆ ‘ಧರ್ಮ ಮತ್ತು ಕಾನೂನು’ ವಿಶೇಷ ಉಪನ್ಯಾಸಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಮಧ್ವ ಮಹಾ ಪರಿಷತ್, 1008 ಸತ್ಯ ಪ್ರಮೋದತೀರ್ಥ ಕೃಪಾ ಪೋಷಿತ ಪಾರಾಯಣ ಸಂಘ ಮತ್ತುಗುರುರಾಘವೇಂದ್ರ ಸ್ವಾಮಿ ಭಕ್ತ ವೃಂದದ ವತಿಯಿಂದ ಹಮ್ಮಿಕೊಂಡಿದ್ದ ಈ ಉಪನ್ಯಾಸಕಾರ್ಯಕ್ರಮದಲ್ಲಿ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ವಿಶೇಷ ಉಪನ್ಯಾಸ ನೀಡುತ್ತಾ, ಧರ್ಮದ ಹಾದಿಯಲ್ಲಿ ನಡೆಯುವುದರಿಂದಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆರೋಗ್ಯಕರ ಸಮಾಜದಲ್ಲಿ ಕಾನೂನು ಪಾಲನೆಗೆ ಹೆಚ್ಚು ಹೆಣಗಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದಿಲ್ಲ ಎಂದರು.
ಧರ್ಮಎಂಬುದು ಮನುಷ್ಯರನ್ನು ಪರಸ್ಪರ ಬೆಸೆಯುವ ಕೆಲಸ ಮಾಡಿದರೆ, ಕಾನೂನು ಆ ನಿಟ್ಟಿನಲ್ಲಿತನ್ನೆಲ್ಲ ಸಹಕಾರವನ್ನು ನೀಡುತ್ತದೆ. ಮೇಲಾಗಿ, ಇವೆರಡೂ ಮನುಷ್ಯರನ್ನು ಪರಸ್ಪರ ಬೆಸೆಯುವ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತವೆಎಂದು ನ್ಯಾಯಮೂರ್ತಿ ಶ್ರೀಶಾನಂದ ನುಡಿದರು.
ಶ್ರೀ ರಾಘವೇಂದ್ರ ಸ್ವಾಮಿ ಮಠದಅಧ್ಯಕ್ಷ ನರೇಂದ್ರಆಚಾರ್ಯ, ಮಠಾಧಿಕಾರಿಗಳಾದ ರಾಮಾಚಾರಘಂಟಿ, ಗಿರೀಶ್‍ಆಚಾರ್ಯಅವಧಾನಿ, ವಿಷ್ಣುದಾಸ್‍ಆಚಾರ್, ಗೋಪಾಲಾಚಾರ್‍ಅಕಮಂಚಿ, ವಿನೋದ್‍ಆಚಾರ್ಯ ಗಲಗಲಿ, ಬಿ.ಜಿ.ದೇಶಪಾಂಡೆ, ಸತ್ಯನಾರಾಯಣಕಾಡ್ಲೂರು, ಡಿ.ಕೆ.ಕುಲಕರ್ಣಿ, ನರೇಂದ್ರಆಚಾರ್ ಫಿರೋಜಾಬಾದ್, ಪ್ರಶಾಂತ ಕೊರಳ್ಳಿ, ಅರವಿಂದ ನವಲಿ, ನರಸಿಂಹಆಚಾರ್ ಬುರ್ಲಿ, ಪವನ ಕೊರವಿ, ವಿನಾಯಕಕುಲಕರ್ಣಿ ಸೇರಿಂತೆಇನ್ನಿತರರು ಉಪಸ್ಥಿತರಿದ್ದರು.