ಹುಬ್ಬಳ್ಳಿ ನೇಹಾಳದ್ದು ಪ್ರೇಮ ಪ್ರಕರಣವಲ್ಲ, ಲವ್ ಜಿಹಾದ್: ಪ್ರಮೋದ ಮುತಾಲಿಕ
ವಿಜಯಪುರ, ಏ.23:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವು ಪ್ರೀತಿ, ಪ್ರೇಮ ಅಲ್ಲ. ಇದು ಲವ್ ಜಿಹಾದ್ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು ಎಂದರು. ಕೇರಳದಲ್ಲಿ ಎರಡು ವರ್ಷದಲ್ಲಿ 3 ಸಾವಿರ ಮತಾಂತರ ಆಗಿದ್ದಾರೆ. ಪ್ರೀತಿ ನಿರಾಕರಿಸಿದ ನೇಹಾ ಹತ್ಯೆ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದರು.
ಧಾರವಾಡದ ಅಂಜುಮನ್ ಇಸ್ಲಾಂ ಅರ್ಧ ದಿನ ಹೋರಾಟ ಮಾಡಿದೆ. ಇದು ಮೊಸಳೆ ಕಣ್ಣೀರು ಆಗಿದೆ. ಇದು ನಾಟಕ ಆಗಿದೆ. ಮದರಸಾದಲ್ಲಿ ಇಸ್ಲಾಂನ ಭಾಗ ಕಲಿಸಲಾಗುತ್ತಿದೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಆರೋಪಿ ಫಯಾಜ್ ಕುಟುಂಬಸ್ಥರಿಗೆ ಪತ್ವಾ ಹೊರಡಿಸಬೇಕು ಎಂದು ಹೇಳಿದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಾಟೆ, ಹರ್ಷ ಕೊಲೆಯಾದ ವೇಳೆ ಯಾಕೆ ಮಾತನಾಡಲಿಲ್ಲ ಎಂದು ಧಾರವಾಡ ಅಂಜುಮನ್ ಇಸ್ಲಾಂ ವಿರುದ್ಧ ಮುತಾಲಿಕ ವಾಗ್ದಾಳಿ ನಡೆಸಿದರು. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆಯೋ ಅಲ್ಲಿಯ ವರೆಗೂ ಇಸ್ಲಾಂ ಎದ್ದು ಕುಣಿಯುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪ್ರೇರಣೆ, ಕಾಂಗ್ರೆಸ್ ಖುರ್ಚಿ ದಾಹಕ್ಕಾಗಿ ಹಿಂದೂಗಳ ಹತ್ಯೆ ಆಗುತ್ತಿದೆ ಎಂದರು. ಕಾಂಗ್ರೆಸ್‍ನವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್‍ನವರು ತೊಳೆಯಲಾರದ ಪಾಪ ಮಾಡಿದ್ದಾರೆ.
ಮೋದಿ ಗೆಲ್ಲಿಸಿ ಭಾರತ ಉಳಿಸಿ
ಬಿಜೆಪಿಗೆ ಮತ ಹಾಕುತ್ತೇವೆ. ಗೆದ್ದ ನಂತರ ನಿದ್ದೆ ಮಾಡುವುದಿಲ್ಲ. ಆದರೆ, ಐದು ವರ್ಷಗಳ ಕಾಲ ಕ್ರಿಯಾಶೀಲರಾಗಬೇಕು. 24 ಗಂಟೆ ಕಾಲ ಫೆÇೀನ್ ಆನ್ ಇರಬೇಕು. ಸಂಸತ್ತಿನಲ್ಲಿ ಸಮಾನ ನಾಗರಿಕ, ಜನಸಂಖ್ಯೆ ನಿಯಂತ್ರಣ, ಸಂಪೂರ್ಣ ಗೋವು ಹತ್ಯೆ ನಿಷೇಧ, ವಕ್ಫ ಬೋರ್ಡ್ ಬ್ಯಾನ್ ಮಾಡಬೇಕು. ಅತಿಕ್ರಮಣ ಮಸೀದಿ, ದೇವಸ್ಥಾನ, ಚರ್ಚ್‍ಗಳು ತೆಗದು ಹಾಕಬೇಕು. ಸರ್ಕಾರ ಶಾಲೆ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಆಗಬೇಕು.
ಖಾಸಗಿ ಶಾಲೆಗಳು ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕಾಗಿ ಸರ್ಕಾರಿ, ಆಸ್ಪತ್ರೆ, ಶಾಲೆಯ ಅಭಿವೃದ್ಧಿ ಮುಖ್ಯವಾಗಿದೆ ಎಂದರು.ಹಿಂದೂ ಕಾರ್ಯಕರ್ತರ ರಕ್ಷಣೆ ಆಗಬೇಕು. ಹಿಂದೂ ಕಾರ್ಯಕರ್ತರ ಮೇಲಿನ ರೌಡಿಶೀಟರ್, ಗೂಂಡಾ ಆ್ಯಕ್ಟ್ ಆಗದಂತೆ ನೋಡಿಕೊಳ್ಳಬೇಕು ಎಂದರು.