ನಂಜನಗೂಡು ರಾಯರಮಠದಲ್ಲಿ ಧಾರ್ಮಿಕ ಶಿಬಿರ ಆರಂಭ
ವಿಜಯಪುರ,ಏ.23:ನಗರದ ಬಾಗಲಕೋಟೆ ರಸ್ತೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂತ್ರಾ ಲಯ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿಗಳ ಆದೇಶದ ಮೇರೆಗೆ ಹಮ್ಮಿಕೊಂಡ ಒಂದು ವಾರ ಕಾಲ ಧಾರ್ಮಿಕ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಏ. 30 ವರೆಗೂ ನಡೆಯುವ ಈ ಶಿಬಿರವನ್ನು ಮಂತ್ರಾಲಯ ಪಂಡಿತ ಶ್ರೀ ವೇಣುಗೋಪಾಲಾಚಾರ್ಯ ಉದ್ಘಾ ಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮ ಸಂಸ್ಕøತಿ ಉಳಿಸಿ ಬೆಳೆಸಲು ಇಂತಹ ಧಾರ್ಮಿಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಂತ್ರಾಲಯ ಮಠದ ಪ್ರತಿ ಶಾಖೆಯಲ್ಲೂ ಪ್ರತಿ ವರ್ಷ ಧಾರ್ಮಿಕ ಶಿಬಿರ ನಡೆಸಲಾಗುತ್ತಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಪುರುಷರು ಮತ್ತು ಮಹಿಳೆಯರೂ ಭಾಗವಹಿಸುವ ಈ ಶಿಬಿರದಲ್ಲಿ ಮಂತ್ರ, ಧರ್ಮ, ಸಂಸ್ಕøತಿ, ಜ್ಯೋತಿಷ್ಯಶಾಸ್ತ್ರ ಮುಂತಾದವುಗಳ ಕುರಿತು ಶಾಸ್ತ್ರ ಬದ್ಧವಾಗಿ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಪಂಡಿತ ಕೃಷ್ಟಾಚಾರ್ಯ ಕಾಖಂಡಕಿ ಮಾತನಾಡಿ, ನಗರದ ಮಕ್ಕಳು, ಹಿರಿಯರು, ಕಿರಿಯರು ಭಾಗವಹಿಸಿ ಶಿಬಿರದ ಲಾಭ ಪಡೆಯಲು ಕೋರಿದರು.
ಮಠದ ವಿಚಾರಣಾಕರ್ತ ಗೋಪಾಲ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಿಗ್ಗೆ 8-30 ಕ್ಕೆ ಪ್ರಾರಂಭವಾಗುವ ಶಿಬಿರ ಸಾಯಂಕಾಲ 5 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಹಾರ, ಭೋಜನ ಮತ್ತು ಹಾಲಿನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಹಿರಿಯ ಭಕ್ತರಾದ ವಾಮನರಾವ ದೇಶಪಾಂಡೆ, ವಿಜಯೀಂದ್ರಾಚಾರ್ಯ ಜೋಶಿ, ದಾಮೋದರಾಚಾರ್ಯ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀಧರಾಚಾರ್ಯ ವೇದಘೋಷ, ಕೊನೆಯಲ್ಲಿ ವ್ಯವಸ್ಥಾಪಕ ರವಿ ಆಚಾರ್ಯ ಅವರಿಂದ ವಂದಿಸಿದರು.