ಪ್ರೀತಿಯ ಆರೈಕೆ ಟ್ರಸ್ಟ್ ನಿಂದ ಆರೋಗ್ಯ ಶಿಬಿರ

ಸಂಜೆವಾಣಿ ವಾರ್ತೆದಾವಣಗೆರೆ.ಏ.೨೩; ಆರೈಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಪ್ರೀತಿಯ ಆರೈಕೆ ಟ್ರಸ್ಟ್ ದಾವಣಗೆರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ನಗರದ ಭಾರತ್ ಕಾಲೋನಿ ಪಂಚಮುಖಿ ದೇವಸ್ಥಾನ ಬಳಿ ಆಯೋಜಿಸಲಾಗಿತ್ತು   ಡಾ. ಟಿ ಜಿ ರವಿಕುಮಾರ್  ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು. ಆರೋಗ್ಯ ಶಿಬಿರದಲ್ಲಿ 500 ಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷೆ ಮಾಡಲಾಯಿತು. ಹೃದ್ರೋಗ, ಕೀಲು ಮೂಳೆ, ಮೂತ್ರಪಿಂಡ, ನರರೋಗ, ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ತಪಾಸಣೆ ಮಾಡಲಾಯಿತು.