ಸಿದ್ದೇಶ್ವರ ಸ್ವಾಮಿಯ  ವೈಭವದ ರಥೋತ್ಸವ

ಸಂಜೆವಾಣಿ ವಾರ್ತೆ
ಹಿರಿಯೂರು.ಏ. 23 –  ತಾಲೂಕಿನ ಸುಪ್ರಸಿದ್ಧ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ವದ್ದೀಕೆರೆಯಲ್ಲಿ ನೆಲೆಸಿರುವ ಸಿದ್ದೇಶ್ವರ ಸ್ವಾಮಿ ಯಾನೆ  ಕಾಲಭೈರವೇಶ್ವರ ಸ್ವಾಮಿ ದೇವರ ಬ್ರಹ್ಮರಥೋತ್ಸವವು ಸೋಮವಾರ ಮಧ್ಯಾನ ಸಾವಿರಾರು ಭಕ್ತ ಸಮೂಹದ ನಡುವೆ ವೈಭವದಿಂದ ನಡೆಯಿತು ವದ್ದೀಕೆರೆ ಸಿದ್ದೇಶ್ವರ ಸ್ವಾಮಿಯ ಬಗ್ಗೆ ಸಾಕಷ್ಟು ಐತಿಹಾಸಿಕ ಕಥೆಗಳು ಇದ್ದು ಸಿದ್ದೇಶ್ವರ ಸ್ವಾಮಿಯು ತನ್ನ ಬಾಯಾರಿಕೆ ನೀಗಲು ತ್ರಿಶೂಲದಿಂದ ನೆಲಕ್ಕೆ ತಿವಿದಿದ್ದರಿಂದ ನೀರು ಚಿಮ್ಮಿ ಬಂತು. ಎನ್ನಲಾಗಿದ್ದು ಈ ಪ್ರದೇಶದಲ್ಲಿರುವ ಬಾವಿಯಲ್ಲಿ ಸದಾಕಾಲವು ನೀರು ತುಂಬಿರುತ್ತದೆ ಎಂಬ ಪ್ರತೀತಿಯಿದೆ ಸಿದ್ಧೇಶ್ವರ ಸ್ವಾಮಿ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದ್ದು  ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು ಶ್ರೀ ಸಿದ್ದೇಶ್ವರ ಸ್ವಾಮಿಯ ರಥವನ್ನು ವಿವಿಧ ಘಮಘಮಿಸುವ ಹೂಗಳು ದೊಡ್ಡ ದೊಡ್ಡ ಹೂವಿನ ಹಾರಗಳಿಂದ ಸಿಂಗಾರಿಸಲಾಗಿದ್ದು ಭಕ್ತಲ ಕಣ್ಮನ ಸೆಳೆಯುವಂತಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ರವರು ತಹಶೀಲ್ದಾರ್ ರಾಜೇಶ್ ಕುಮಾರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು