ಗಾಯತ್ರಿ ಸಿದ್ದೇಶ್ವರ್ ಗೆ‌ ಉಪ್ಪಾರ ಸಮಾಜದಿಂದ ಬೆಂಬಲ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೩ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಜಿಲ್ಲಾ ಉಪ್ಪಾರ ಸಮಾಜ ಬೆಂಬಲ ಘೋಷಿಸಿದೆ. ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ ಹದಡಿ, ಮಾಜಿ ಉಪ ಮೇಯರ್ ಪಿ.ಎಸ್.ಜಯಣ್ಣ, ಚನ್ನಗಿರಿ ಉಪ್ಪಾರ ಸಂಘದ ಅಧ್ಯಕ್ಷ ದೇವರಳ್ಳಿ ಬಸವರಾಜ್, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ್, ಪ್ರವರ್ಗ 1 ಜಿಲ್ಲಾಧ್ಯಕ್ಷ ಶ್ರೀನಿವಾಸ್ ತುರ್ಚಘಟ್ಟ,  ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ.ಎಂ., ಬಾತಿ ರೇವಣ್ಣ, ಮಗನಹಳ್ಳಿ ಹಾಲೇಶಪ್ಪ, ಹಿಂಡಸಕಟ್ಟೆ ಮಹಾಬಲೇಶ್, ಕೈದಾಳೆ ಗುರುಪ್ರಸಾದ್, ಹೊಸಹಳ್ಳಿ ಶಿವಮೂರ್ತಿ, ದೇವರಹಳ್ಳಿ ದೇವೇಂದ್ರಪ್ಪ ಮತ್ತು ಬೆಂಬಲಿಗರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಜೊತೆಯಲ್ಲಿದ್ದರು.