ಮತದಾನದ ಬಗ್ಗೆ ರಂಗುರಂಗಿನ ಚಿತ್ರ ಬಿಡಿಸಿದ ವಿದ್ಯಾರ್ಥಿಗಳು
ಕಲಬುರಗಿ:ಏ.23: ತಾಲೂಕು ಪಂಚಾಯಿತಿ ಕಾಳಗಿ ಪ್ರವಾಸಿ ಮಂದಿರದಲ್ಲಿ ಮತದಾನ ಜಾಗೃತಿ ಅಭಿಯಾನ ಅಡಿಯಲ್ಲಿ ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಯಿತು.
ವಿದ್ಯಾರ್ಥಿಗಳು ಸುಂದರವಾದ ಬಣ್ಣ ಬಣ್ಣದ ರಂಗೋಲಿಯ ಮೂಲಕ ಮತದಾನ ನಮ್ಮ ಹಕ್ಕು ಅದನ್ನು ತಪ್ಪದೇ ಚಲಾಯಿಸುತ್ತೇವೆ, ಮೇ 7 ರಂದು ಮತದಾನ ದಿನ, ಸದೃಢ ಭಾರತಕ್ಕಾಗಿ ಮತದಾನ ತಪ್ಪದೆ ಮಾಡಿ ಎಂಬ ಘೋಷ ವಾಕ್ಯಗಳು ಸುಂದರವಾದ ಚಿತ್ರದ ಮೂಲಕ ಬಿಡಿಸಿದರು.
ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಪಾಟೀಲ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಮತದಾನ ಶ್ರೇಷ್ಠ ಕಾರ್ಯ, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ತೋರಬೇಕು, ನಮ್ಮ ಮತ ನಮ್ಮ ಹಕ್ಕು, ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ, ಪ್ರತಿಯೊಬ್ಬರು ಮತದಾನ ಮಾಡಿ ನಿಮ್ಮ ಸುತ್ತುಮುತ್ತಲಿನ ಜನರು ಕೂಡ ಮತದಾನದಿಂದ ಹಿಂದೆ ಉಳಿಯದಂತೆ ನೋಡಿಕೊಳ್ಳಿ, ನಮ್ಮ ಒಂದು ಮತ ನಮ್ಮ ಮುಂದಿನ ಭವಿಷ್ಯ ಬದಲಾಯಿಸಬಹುದು. ಅತೀ ಹೆಚ್ಚು ಮತದಾನ ಆಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಎಲ್ಲರೂ ಪಾಲ್ಗೊಳ್ಳಬೇಕು ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಮತವನ್ನು ತಪ್ಪದೇ ಚಲಾಯಿಸುವಂತೆ ಮನವಿ ಮಾಡಿದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕಿರಣ್, ದ್ವೀತಿಯ ಪ್ರಿಯಾಂಕಾ, ತೃತೀಯ ಬಹುಮಾನ ಯಶೋಧಾ, ಸಮಾಧಾನಕರ ಬಹುಮಾನ ಬಸವರಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪುಸ್ತಕಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಭಾಗ್ಯಶ್ರೀ, ಸಪ್ನಾ, ರೇವಣಸಿದ್ದಪ್ಪ, ಶಿವಲೀಲಾ ಎಲ್ಲರಿಗೂ ಪುಸ್ತಕಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ತಾಲುಕು ನರೇಗಾ ಐ.ಈ.ಸಿ ಸಂಯೋಜಕಿ ಜ್ಯೋತಿ ಸಾಗರ್, ಪಂಚಾಯಿತಿ ಸಿಬ್ಬಂದಿಗಳಾದ ನರಸಯ್ಯ, ಭುವನೇಶ್ವರಿ, ಮಮತಾ, ಅಲಿ, ಟಿಡಿಟm ಸಂಘದ ಮಹಿಳೆಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.