ಮೇ 26 ರಂದು ಪರಿಷ್ಕøತ “ಸ್ನೇಹ ಸಂಗಮ” ಪರಿಚಯ ಗ್ರಂಥ ಲೋಕಾರ್ಪಣೆ
ಕಲಬುರಗಿ:ಏ.23: ಕೋಲಿ(ಕಬ್ಬಲಿಗ) ಸಮಾಜದ ನೌಕರರ ಸ್ವಾಭಿಮಾನದ ಪರಿಷ್ಕೃತ “ಸ್ನೇಹ ಸಂಗಮ” ಪರಿಚಯ ಗ್ರಂಥ ಮೇ 26 ರಂದು ಬೆಳಗ್ಗೆ 10-30 ಗಂಟೆಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಲೋಕಾರ್ಪಣೆಗೊಳಿಸುವ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಸಂಘದ ಅದ್ಯಕ್ಷರಾದ ನೀಲಕಂಠ ಜಮಾದಾರ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಕೆಲವು ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಎಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕೆಂದು ಕೈಮುಗಿದು ವಿನಂತಿಸಿಕೊಂಡರು.ಈ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಭಾಗವಹಿಸಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸುವ ಮಹತ್ತರ ಸಲಹೆ ಸೂಚನೆಗಳನ್ನು ನೀಡಿದರು. ಎಂದು ಪ್ರಚಾರ ಸಮಿತಿ ಅದ್ಯಕ್ಷ ಸಿದ್ದಪ್ಪ ಜಿ ಮಹಾಗಾಂವ ತಿಳಿಸಿದ್ದಾರೆ.