ನೇಹಾ ಹಿರೇಮಠ ಕೊಲೆ ಆರೋಪಿಗೆ ಸಾರ್ವಜನಿಕವಾಗಿ ಎನ್ ಕೌಂಟರ್ ಮಾಡಿ
ಔರಾದ :ಏ.23: ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಅಮಾನವೀಯ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದ ಆರೋಪಿಗೆ ಸಾರ್ವಜನಿಕವಾಗಿ ಎನ್’ಕೌಂಟರ್ ಮಾಡಬೇಕು ಇಲ್ಲವೇ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಅಂದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಲಿಂಗಾಯತ ಸಮಾಜ ಯುವ ಸಂಘದ ಅಧ್ಯಕ್ಷ ವಿರೇಶ ಅಲಮಾಜೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಜ್ಞಾನ ದೇಗುಲದಲ್ಲಿ ನುಗ್ಗಿ ನೇಹಾ ಹಿರೇಮಠ ಅವರ ಮೇಲೆ ಹಲ್ಲೆ ನಡೆಸಿದ ಫಯಾಜ ಸುಮಾರು 9 ಸಾರಿ ಚುಚ್ಚಿ ಕೊಲೆಗೈದಿದ್ದಾನೆ, ಇದನ್ನು ಕಂಡಾಗ ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ತಿಳಿಯುತ್ತದೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಯುವತಿಯರ ಮೇಲೆ ಈ ರೀತಿಯ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ, ಸರ್ಕಾರ ಆರೋಪಿಗಳನ್ನು ಸಾರ್ವಜನಿಕವಾಗಿ ಎನ್ಕೌಂಟರ್ ಮಾಡಬೇಕು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು, ಈ ಹಿಂದೆ ಬೀದರ ಪೂಜಾ ಕೋಸಂ ಅವರ ಘಟನೆ ಕೂಡ ಇದೆ ರೀತಿ ಆಗಿತ್ತು, ಆರೋಪಿಗಳನ್ನು ಬಂಧಿಸಿ ರಕ್ಷಣೆ ನೀಡುವಂತೆ ಆದರೆ ಇಂತಹ ಕೃತ್ಯಗಳು ನಿಲ್ಲುವುದಿಲ್ಲ, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕೊಲೆ ಪಾತಕಿಗಳಿಗೆ ಶುಟ್ ಮಾಡುವ ಶಿಕ್ಷೆ ಇದ್ದು, ಕರ್ನಾಟಕದಲ್ಲಿ ಸಹ ನಮ್ಮ ಸರ್ಕಾರ ಇದನ್ನು ಜಾರಿಗೊಳಿಸಬೇಕು, ಈ ಹಿಂದೆ ಹೈದ್ರಾಬಾದ್‍ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೆÇೀಲಿ???ರು ಆರೋಪಿಗಳನ್ನು ಶುಟ್ ಮಾಡಿ ಬೀಸಾಡಿದಂತೆ ಫಯಾಜ್‍ಗೆ ಸಹ ಅದೇ ಶಿಕ್ಷೆ ನೀಡಬೇಕು, ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಆದರೆ, ಅವುಗಳಿಗೆಲ್ಲ ಮರಳಿ ನೆನಪಿಸುವ ಪರಿಸ್ಥಿತಿ ಇದಲ್ಲ. ಕೆಲವರು ಇದನ್ನ ಒಲೈಕೆ ರಾಜಕೀಯ ಮಾಡಲು ಹೊರಟಿದ್ದು ವಿಷಾದನೀಯ, ಹೆಣದ ಮೇಲೆ ರಾಜಕೀಯ ಮಾಡದೇ ಈ ಪ್ರಕರಣದ ಹಿಂದಿನ ಮರ್ಮವನ್ನು ಎಳೆ ಎಳೆಯಾಗಿ ಹೊರ ತರಬೇಕು ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.