ಡಾ.ಪರಮೆಶ್ವರ ವಿರುದ್ಧ ಅವಹೇಳನಕಾರಿ ಹೇಳಿಕೆ: ನೀಡಿದವರಿಗೆ ಶಿಕ್ಷೆಯಾಗಲಿ: ಬಕ್ಕಪ್ಪ ಕೋಟೆ
ಬೀದರ್:ಏ.23: ರಾಜ್ಯದ ಗ್ರಹ ಸಚಿವರಾದ ಡಾ.ಜಿ ಪರಮೇಶ್ವರ ಅವರ ಹಾಗೂ ಅವರ ಕುಟುಂಬದ ಬಗ್ಗೆ ಏಕವಚನದಲ್ಲಿ ಅವಹೇಳನಕಾರಿ ಪದಗಳನ್ನು ಬಳಿಸಿ ಭಾಷಣ ಮಾಡಿದ ಬಿಜೆಪಿ ವಾಣಿಜ್ಯ ಹಾಗೂ ಕೈಗಾರಿಕೆ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿರುಪಾಕ್ಷ ಗಾದಗಿ ಅವರ ವಿರೂದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ದ್ರಾಕ್ಷರಸ ಮಂಡಳಿಯ ಮಾಜಿ ಅಧ್ಯಕ್ಷ ಬಕ್ಕಪ್ಪ ಕೋಟೆ ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಡಾ.ಜಿ ಪರಮೆಶ್ವರ ಈ ನಾಡಿನ ಒಬ್ಬ ಪ್ರಶ್ನಾತೀತ ನಾಯಕರಾಗಿರುವರು. ಅವರೊಬ್ಬ ಅಜಾತ ಶತ್ರು, ಎಲ್ಲ ಧರ್ಮಿಯರನ್ನು ಗೌರವದಿಂದ ಕಾಣುವ ಸ್ವಭಾವದವರಾಗಿದ್ದಾರೆ. ಪ್ರಾಮಾಣಿಕ ಹಾಗೂ ಅಷ್ಟೇ ನಿಷ್ಟಾವಂತ ರಾಜಕಾರಣ ಮಾಡುತ್ತ ಬಂದಿರುವ ಇವರ ಧರ್ಮಪತ್ನಿ ಇವರಿಗಿಂತ ಒಂದು ಕಾಲು ಮುಂದೆ ಎಂಬಂತೆ ತುಂಬ ಸೌಮ್ಯ ಸ್ವಭಾವದವರಾಗಿದ್ದಾರೆ. ಅಂಥವರ ಬಗ್ಗೆ ಅತ್ಯಂತ ನೀಚ ಪದ ಬಳಿಕೆ ಮಾಡಿರುವ ವಿರುಪಾಕ್ಷ ಗಾದಗಿ ಇಂತಹ ಪದ ಬಳಿಕೆ ಮಾಡುವುದಕ್ಕಿಂತ ಮುಂಚೆ ತನ್ನ ಮನೆಯಲ್ಲಿ ತಾಯಿ, ಸಹೋದರಿ ಸಹ ಹೆಣ್ಣು ಎಂಬುದನ್ನು ಮರೆತು ಮಾತನಾಡಿದ್ದಾರೆ. ಹೆಣ್ಣು ಯಾರೆ ಇರಲಿ ಅವರಿಗೆ ಎಲ್ಲ ಸಮಾಜಗಳು ಗೌರವ ಕೊಡಬೇಕು. ಹುಬ್ಬಳ್ಳಿಯಲ್ಲಿ ಹಾಡಹಗಲೆ ಆದ ಕೊಲೆ ಅತ್ಯಂತ ಹ್ಯೆಯ್ಯ ಕೃತ್ಯವಾಗಿದ್ದು, ಇದನ್ನು ಖಂಡಿಸುವ ಭರದಲ್ಲಿ ಇನ್ನೊಬ್ಬರ ಮನಸ್ಸಿಗೆ ನೋವು ಕೊಡುವಂಥ ಕಾರ್ಯ ಯಾರು ಸಹ ಮಾಡಬಾರದು. ವಿರುಪಾಕ್ಷ ಮಾಡಿರುವ ತಪ್ಪು ತಪ್ಪೆ. ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎಂದರೆ ಡಾ.ಪರಮೇಶ್ವರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿದಕ್ಕೆ ವಿರುಪಾಕ್ಷಗೆ ತಕ್ಕ ಶಾಸ್ತಿ ಆಗ£ಬೇಕಿದೆ ಎಂದವರು ಹೇಳಿದರು.