ಇಂಚುರೆ ರವರಿಗೆ ಡೋಣಗಾಪುರ್ ಗ್ರಾಮದಲ್ಲಿ ಸನ್ಮಾನ
ಚಿಟಗುಪ್ಪ:ಏ.23: ಪಟ್ಟಣದ ಶ್ರೀಮಂತರಾವ ಇಂಚುರೆ ಅವರಿಗೆ ರಾಜ್ಯಮಟ್ಟದ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಲಭಿಸಿದಕ್ಕಾಗಿ ಭಾಲ್ಕಿ ತಾಲೂಕಿನ ಡೋಣಗಾಪುರ್ ಗ್ರಾಮದ ದೋಣೇಶ್ವರ ದೇವಾಲಯದ ಆವರಣದಲ್ಲಿ ಜಪಯಜ್ಞ ಕಾರ್ಯಕ್ರಮದ ನಂತರ ಡೋಣಗಾಪುರ್. ಮೇಹಕರ್. ತಡೋಳಾ. ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷ.ಭ್ರ. ರಾಚೋಟಿ ಶಿವಾಚಾರ್ಯ. ಕಾರ್ಯಕ್ರಮದಲ್ಲಿ ಶ್ರೀಮಂತರಾವ್ ಇಂಚುರೆ ಹಾಗೂ ಡಾ.ಸಂಗಮೇಶ್ ಹಜನಾಳೆ.
ಡಾ. ಪರಮೇಶ್ವರಿ ಲದ್ದೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಪೂಜ್ಯ ಷ. ಭ್ರ. ಹಾವಗಿ ಲಿಂಗ ಶಿವಾಚಾರ್ಯರು. ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್. ಚಂದ್ರಕಾಂತ್ ಕಡಾಳೆ. ಸಾಹಿತಿ ವಿಶ್ವನಾಥ್ ಡೋನೂರ್. ಉಪನ್ಯಾಸಕರಾದ ರಮೇಶ್ ಹಜನಾಳೆ. ವಿಜಯಕುಮಾರ್ ಚಿದ್ರೆ. ಬಾಬುರಾವ ವೀರ್ ಶೆಟ್ಟಿ ಇನ್ನು ಮುಂತಾದ ಊರಿನ ಗಣ್ಯ ವ್ಯಕ್ತಿಗಳು ಹಾಜರಿದ್ದರು.