ಸಿಡಿಲಿಗೆ ಎರಡು ಎತ್ತುಗಳು ಬಲಿ
ಔರಾದ್ : ಏ.23:ಸಿಡಿಲು ಬಡಿದ ಪರಿಣಾಮ ಔರಾದ್ ತಾಲೂಕಿನ ಕೊಳ್ಳುರು ಗ್ರಾಮದಲ್ಲಿ ಎರಡು ಎತ್ತುಗಳು ಬಲಿಯಾದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ಸಾಗರ ಬಸವರಾಜ ಪಾಟೀಲ್ ಎಂಬವರಿಗೆ ಸೇರಿದ ಎರಡು ಎತ್ತುಗಳು ಮೃತಪಟ್ಟಿವೆ. 1.50 ಲಕ್ಷ ರೂ. ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತಂತೆ ಚಿಂತಾಕಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.
ಹೊಲದಲ್ಲಿರುವ ಮರದ ಕೆಳಗೆ ಎತ್ತುಗಳು ಕಟ್ಟಿದ್ದು, ಸಾಯಂಕಾಲ 6 ಗಂಟೆ ಹೊತ್ತಿಗೆ ಸಿಡಿಲು ಬಡಿದು ಎರಡು ಎತ್ತುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳನ್ನು ಕಳೆದುಕೊಂಡ ರೈತ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.