ಸ್ವಾಭಿಮಾನ ಮೈಗೂಡಿಸಿಕೊಳ್ಳಲು ಕರೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.23: ವಿದ್ಯಾರ್ಥಿಗಳು ನಾಡಾಭಿಮಾನ,ದೇಶಾಭಿಮಾನ ಜೊತೆಗೆ ಸ್ವಾಭಿಮಾನ ಗುಣಗಳನ್ನು ಮೈಗೂಡಿಸಿಕೊಂಡು ಬಾಳಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರಗಾಲ ಬೇಸಿಗೆ ಬಿಸಿಯೂಟದಲ್ಲಿ  ಹಾಜರಿದ್ದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜೀವನ ಸಾಧನೆ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಿಲಕ್ ಅವರ ಆದರ್ಶ ಗುಣ ಹಾಗೂ ದೇಶಾಭಿಮಾನ ಗುಣಗಳನ್ನು ಅಳವಡಿಸಿಕೊಳ್ಳಬೇಕು.ಶಿಕ್ಷಣ ವಂತರಾಗುವುದರ ಜೊತೆಗೆ ವಿಚಾರ ವಂತರಾಗೋಣ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಸಿಂಧೂ, ಜ್ಯೋತಿ, ಕುರುಬರ ಶಿಲ್ಪ ಹಾಗೂ ಹರ್ಷವರ್ಧನ್ ಗೆ ಬಹುಮಾನ ವಿತರಿಸಲಾಯಿತು.
ಪೋಷಕರಾದ ಹನುಮಂತಪ್ಪ, ಮಠದ ಶಿವಪ್ಪ,ಕೇರಳ,ಎರ್ರಿಸ್ವಾಮಿ,ವಿದ್ಯಾರ್ಥಿಗಳಾದ ವೈಶಾಲಿ, ತಿಪ್ಪೇಶ್ವರಿ, ಪ್ರಿಯಾಂಕಾ, ಚಂದು ಮುಂತಾದವರು ಉಪಸ್ಥಿತರಿದ್ದರು.