ಹಿರೇಹೆಗ್ದಾಳ್  : ಸಿಡಿಲಿಗೆ ಆಕಳು ಬಲಿ.
ಸಂಜೆವಾಣಿ ವಾರ್ತೆ 
ಕೂಡ್ಲಿಗಿ. ಏ.23 :- ಮಳೆಗಾಲದ ಆರಂಭದಲ್ಲೇ  ಮಳೆಗಾಳಿ, ಗುಡುಗು ಸಿಡಿಲಿನ ಆರ್ಭಟ ಜೋರಾಗಿದ್ದು  ಸೋಮವಾರ ಸಂಜೆ ತಾಲೂಕಿನ ಹಿರೇಹೆಗ್ದಾಳ್ ಗ್ರಾಮದ ಹೊರವಲಯದ ಗದ್ದೆಯೊಂದರಲ್ಲಿ ಕಟ್ಟಿ ಹಾಕಿದ್ದ ಆಕಳುಗೆ ಸಿಡಿಲು ಬಡಿತದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ಹಿರೇಹೆಗ್ದಾಳ್ ಗ್ರಾಮದ ಎಸ್ ಎಂ ಚಿದಾನಂದಯ್ಯ ಎಂಬುವ ರೈತನ ಆಕಳಾಗಿದ್ದು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದೆ. ಈತನು ತನ್ನ ಗದ್ದೆಯಲ್ಲಿ ಆಕಳನ್ನು ಕಟ್ಟಿಹಾಕಿದ್ದು ಸೋಮವಾರ ಸಂಜೆ 6-45ಗಂಟೆ ಸುಮಾರಿಗೆ  ಮಳೆ ಗಾಳಿ ಶುರುವಾಗಿ   ಗುಡುಗಿನ ಆರ್ಭಟದಲ್ಲಿ  ಮಲಗಿದ್ದ ಆಕಳಿಗೆ ಸಿಡಿಲು ಹೊಡೆದ ಪರಿಣಾಮ ಸುಮಾರು ನಲವತ್ತು ಸಾವಿರ ರೂ ಬೆಲೆ ಬಾಳುವ ಆಕಳು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಗುಪ್ಪಾಲ್  ನೇತ್ರಾವತಿ ಭೇಟಿ ಪರಿಶೀಲನೆ ನಡೆಸಿ ಕೂಡ್ಲಿಗಿ ತಹಸೀಲ್ದಾರ್ ರಾಜು ಪಿರಂಗಿ ಗಮನಕ್ಕೆ ತಂದಿದ್ದಾರೆ ಎಂದು ತಿಳಿದಿದೆ.