ಕ್ಕೆ ಸಿಡಿಲು, ಪಕ್ಕದ ಮೇವಿನ ಬಣವೆ ಭಸ್ಮ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.23 :- ಮಳೆ ಗಾಳಿಯ ನಡುವೆ ಹೊಲದಲ್ಲಿದ್ದ ತೆಂಗಿನಮರಕ್ಕೆ ಸಿಡಿಲು ಬಡಿದು ಅಲ್ಲಿಯೇ ಪಕ್ಕದಲ್ಲಿದ್ದ ಮೂರು ಲೋಡ್ ಮೆಕ್ಕೆಜೋಳ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಹೊರವಲಯದ ರೈತನೋರ್ವನ  ಜಮೀನಿನಲ್ಲಿ ಸೋಮವಾರ ಸಂಜೆ ಜರುಗಿದೆ.
ಪೂಜಾರಹಳ್ಳಿ ಕೃಷ್ಣಪ್ಪ  ಎನ್ನುವ ರೈತನ ಜಮೀನಿನಲ್ಲಿ ಈ ದುರ್ಘಟನೆ ಜರುಗಿದೆ. ಸೋಮವಾರ ಸಂಜೆ ತಾಲೂಕಿನ ನಾನಾ ಭಾಗದಲ್ಲಿ ಮೋಡಕವಿದ ವಾತಾವರಣವಿತ್ತು. ಮತ್ತು  ಗುಡುಗು, ಸಿಡಿಲಿನ ಆರ್ಭಟ ಸಹ ಜೋರಾಗಿತ್ತು. ಹೀಗಾಗಿ, ತಾಲೂಕಿನ ಪೂಜಾರಹಳ್ಳಿಯಲ್ಲಿ ಕೃಷ್ಣಪ್ಪ  ಎನ್ನುವವರ ಹೊಲದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದಾಗ ಅದರ ಕಿಡಿ ಪಕ್ಕದಲ್ಲಿದ್ದ ಮೇವಿನ ಬಣವೆಗೆ ಬಿದ್ದು ಬೆಂಕಿ ತಗುಲಿ  ಹೊಲದಲ್ಲಿದ್ದ  ಮೂರು  ಲೋಡಿನಷ್ಟಿರುವ ಇಪ್ಪತ್ತು ಸಾವಿರ ರೂ ಮೌಲ್ಯದ  ಮೆಕ್ಕೆಜೋಳದ ಸೊಪ್ಪೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದರಿಂದ 20ಕ್ಕೂ ಹೆಚ್ಚು ಎಮ್ಮೆಗಳು, ಮೂರು ಜೊತೆ ಎತ್ತುಗಳು ಇದ್ದು ಮೇವಿನ ಕೊರತೆ ಕಾಡುವ ಬಗ್ಗೆ ರೈತ ಕೃಷ್ಣಪ್ಪ ಆತಂಕಗೊಂಡಿದ್ದಾನೆ ಎಂದು ಹೇಳಬಹುದಾಗಿದೆ.
ಪ್ರಕೃತಿ ವಿಕೋಪದಡಿ ನಷ್ಟ ಅನುಭವಿಸಿದ ರೈತನ ಮೇವು ಸಂಪೂರ್ಣ ಸಿಡಿಲ ಹೊಡೆತಕ್ಕೆ ಭಸ್ಮವಾದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಇಲಾಖೆಯ ಹೊಸಹಳ್ಳಿ ಪ್ರಭಾರಿ ಕಂದಾಯ ನಿರೀಕ್ಷಿಕ ಚನ್ನಬಸಪ್ಪ ತಿಳಿಸಿದ್ದಾರೆ.