ಮಹಿಳಾ ಮತದಾರರ ಮನವೊಲಿಕೆಯಲ್ಲಿ ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.23: ನಗರದಲ್ಲಿ ಇಂದು ನಡೆದ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೆಚ್ಚಿನದಾಗಿ ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡಿ ಮತಯಾಚನೆ ಮಾಡಿದ್ದು. 
ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳಿಂದ ಮಹಿಳೆಯರ ಮನ ಕದಲಿಕೆಯನ್ನು ಅರ್ಥ ಮಾಡಿಕೊಂಡಿರುವ ಶ್ರೀರಾಮುಲು ಪ್ರಚಾರಕ್ಕೆ ಹೋದಲ್ಲೆಲ್ಲ ಬಹುತೇಕ ಮಹಿಳಾ ಮತದಾರರ ಬಳಿ ತೆರಳಿ. ಕಾಂಗ್ರೆಸ್ ಗ್ಯಾರೆಂಟಿಗಳಿಂದ ನಿಮಗೆ ಒಂದಿಷ್ಟು ಹಣ ಸಿಕ್ಕಿರಬಹುದು. ಆದರೆ ಇವು ಶಾಶ್ವತವಲ್ಲ. ಈ ಚುನಾವಣೆ ನಂತರ ನಿಲ್ಲಿಸುತ್ತಾರೆ. ಐದು ವರ್ಷಗಳ ಮೋದಿ ಗ್ಯಾರೆಂಟಿ ಬಗ್ಗೆ ತಿಳಿದುಕೊಂಡು ಬಿಜೆಪಿಗೆ ಮತ ನೀಡಿ, ದೇಶ ಸುರಕ್ಷೆ,  ಮಹಿಳೆಯರಿಗೆ ಕೌಸಲ್ಯ ಅಭಿವೃದ್ಧಿ, ವಿವಿಧ ಸಾಲ ಯೋಜನೆ ಮೂಲಕ ಆರ್ಥಿಕವಾಗಿ ಸಭಲರನ್ನಾಗಿ ಮಾಡುತ್ತಿದೆ. ಬಿಜೆಪಿ ಹೆಚ್ಚು ಮಕ್ಕಳು ಜನಿಸುತ್ತಿದ್ದರೆ ನೀಡುತ್ತಿದ್ದ ಬಾಂಡ್ ನ್ನು ಕಾಂಗ್ರೆಸ್ ರದ್ದು ಮಾಡಿದೆ. ಅದಕ್ಕಾಗಿ ಮಹಿಳೆಯರು ಬಿಜೆಪಿಗೆ  ಮತನೀಡಿ. ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುವೆ ಎಂದು ಮನವೊಲಿಕೆ ಮಾಡುತ್ತಿದ್ದಾರೆ.