ಆಧ್ಯಾತ್ಮಿಕ ಪ್ರವಚನ
ನವಲಗುಂದ,ಏ23 : ತುಪ್ಪದಕುರಹಟ್ಟಿ ಗ್ರಾಮದ ಶ್ರೀ ಭೂಸನೂರ ಸಂಸ್ಥಾನ ಬೃಹನ್ಮಠ ಲಿಂ ಸಂಗಮೇಶ್ವರ ಶಿವಾಚಾರ್ಯಸ್ವಾಮಿಗಳ 27ನೆಯ ಪುಣ್ಯಸ್ಮರಣೋತ್ಸವ ಅಂಗವಾಗಿ ಅಧ್ಯಾತ್ಮಿಕ ಪ್ರವಚನ ಹಾಗೂ ಜನಜಾಗೃತಿ ಪಾದಯಾತ್ರೆ ಸಮಾರಂಭವು ಇದೆ ಏ 26 ರಿಂದ ಏ 30 ರ ವರೆಗೆ ಗ್ರಾಮದ ಶ್ರೀ ಭೂಸನೂರ ಸಂಸ್ಥಾನ ಬೃಹನ್ಮಠದಲ್ಲಿ ಜರುಗಲಿದೆ.
ಏ 26 ರಂದು ಶುಕ್ರವಾರ ಸಾಯಂಕಾಲ 6.30ಕ್ಕೆ ಅಧ್ಯಾತ್ಮಿಕ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ಏ 27 ರಂದು ಶನಿವಾರ ಸಾಯಂಕಾಲ ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗವಿಮಠ ನವಲಗುಂದ, ಶ್ರೀ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಪುಣ್ಯಾರಣ್ಯ ಪತ್ರಿವನ ಮಠ ನರಗುಂದ, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪಾರಮಾರ್ಥ ಗವಿಮಠ ಸಿದ್ದರಹಳ್ಳಿ ಹಾಗೂ ಶ್ರೀ ವಾಲಿ ಗುರುಗಳು ಅಣ್ಣೀಗೇರಿ ಇವರುಗಳಿಂದ ನೆರವೇರಲಿದೆ.
ಏ 28 ರಂದು ರವಿವಾರ ಸಾಯಂಕಾಲದ ಕಾರ್ಯಕ್ರಮಕ್ಕೆ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ಹಾಲಸ್ವಾಮಿ ವಿರಕ್ತಮಠ.ಚನ್ನಗೀರಿ, ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ.ನೆಗಳೂರು, ಶ್ರೀ ವೀರಸಂಗಮೇಶ್ವರ ಶಿವಾಚಾರ್ಯಸ್ವಾಮಿಗಳು ಚರಂತಿಮಠ.ಕುಂದರಗಿ, ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹಮಠ ಅಣ್ಣಿಗೇರಿ ಇವರುಗಳು ಸಾನಿಧ್ಯವಹಿಸುವರು
ಡಾ.ಹಣಮಂತ ಮಳಲಿ ಖ್ಯಾತ ಪಾರಂಪರಿಕ ವೈದ್ಯರು ವಾಸನ ಇವರು ಉಪನ್ಯಾಸ ನೀಡುವರು
ಏ 29 ಸೋಮವಾರದಂದು ಸಾಯಂಕಾಲ ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ, ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು ಗುರುಶಾಂತೇಶ್ವರಮಠ ಶಲವಡಿ, ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ದೇವಮಂದಿರ ಮಹಾಮಠ ಮಣಕವಾಡ, ಹಾಗೂ ಶ್ರೀ ಗುರುಶಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ವೆಂಕಟಾಪೂರ-ಜಿಗೇರಿ ಇವರುಗಳು ವಹಿಸುವರು
ಅತಿಥಿಗಳಾಗಿ ಪಲ್ಲಾದ ಜೋಶಿ, ಶಂಕರ ಪಾಟೀಲ ಮುನೇನಕೊಪ್ಪ, ಬಿ. ಬಿ. ಗಂಗಾಧರಮಠ, ಷಣ್ಮುಖ ಗುರಿಕಾರ, ಶಿದ್ಧನಗೌಡ ಪಾಟೀಲ ಆಗಮಿಸುವರು.
ಏ 30 ರಂದು ಮಂಗಳವಾರ ಸಂಜೆ 5 ಗಂಟೆಗೆ ತುಪ್ಪದಕುರಹಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಲಿಂ. ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರ ಭವ್ಯ ಮೆರುವಣಿಗೆ ಜರುಗಲಿದೆ.
ಅದೇ ದಿನ ಸಾಯಂಕಾಲ 6.30 ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ತೊಂಟದ ಸಿದ್ದರಾಮ ಮಹಾಸ್ವಾಮಿಗಳು ಎಡೆಯೂರು, ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ, ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಹಾಗೂ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮುತ್ತಿನಕಂತಿಮಠ ಅಕ್ಕಿಆಲೂರ ಇವರುಗಳು ಸಾನಿಧ್ಯವಹಿಸುವರು.
ಶ್ರೀ ಸದ್ಗುರು ಸಮರ್ಥ ಸದಾಶಿವ ಮಹಾರಾಜರು ಕನ್ನೂರು, ಡಾ. ಶಿವಕುಮಾರ ಸ್ವಾಮಿಗಳು, ಧರ್ಮಾಧಿಕಾರಿಗಳು, ಸುಕ್ಷೇತ್ರ ಸಿದ್ದನಕೊಳ್ಳ, ಹಾಗೂ ಶರಣ ಬಾಬು ಅಜ್ಜನವರು ಮೈಹಬೂಬ ಸುಭಾನಿ ದರ್ಗಾ, ನರಗುಂದ ಇವರುಗಳ ಸಮ್ಮುಖದಲ್ಲಿ ಜರುಗುವ ಕಾರ್ಯಕ್ರಮದ ಅತಿಥಿಗಳಾಗಿ ಶಾಸಕ ಎನ್. ಎಚ್. ಕೋನರಡ್ಡಿ, ಕ್ರೀಡಾ ಪ್ರಾಧಿಕಾರ ನಿಗಮದ ಅಧ್ಯಕ್ಷ ವಿನೋದ ಅಸೂಟಿ, ಗಣ್ಯವರ್ತಕರಾದ ಬಾಲಚಂದ್ರ ಭರಮಗೌಡ್ರ ಹಾಗೂ ದಾನಯ್ಯ ಗಣಾಚಾರಿ ಆಗಮಿಸುವರು. ನಿವೃತ್ತ ನೌಕರರಿಗೆ ಸನ್ಮಾನ ಜರುಗುವುದು.
ಕಾರ್ಯಕ್ರಮದ ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಗ್ರಾಮದ ಪ್ರತಿ ವಾರ್ಡಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಲಿದೆ.