ಮಹಿಳೆ ಕೊಲೆ ಯುವಕ ಸೆರೆ
ಬೆಂಗಳೂರು,ಏ.೨೩- ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್?ನ ಮನೆಯೊಂದರಲ್ಲಿ ನಗ್ನವಾಗಿ ಒಂಟಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಬೇಧಿಸಿರುವ ಕೊಡಿಗೇಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಕೊಲೆಗೈದು ಪರಾರಿಯಾಗಿದ್ದ ಹೇರೋಹಳ್ಳಿ ಮೂಲದ ನವೀನ್ ಬಂಧಿತ ಆರೋಪಿಯಾಗಿದ್ದಾನೆ.
ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದ ಶೋಭಾ, ಕೊಡಿಗೆಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದರು. ಈ ವೇಳೆ ಶೋಭಾಗೆ ಇನ್ಸ್ಟಾಗ್ರಾಂನಲ್ಲಿ ಆರೋಪಿ ನವೀನ್ ಪರಿಚಯವಾಗಿದ್ದ. ಪರಿಚಯವು ಸ್ನೇಹ, ಪ್ರೀತಿಗೆ ತಿರುಗಿ, ಮಗನ ವಯಸ್ಸಿನ ಯುವಕನೊಂದಿಗೆ ಶೋಭಾ ಅನೈತಿಕ ಸಂಬಂಧವನ್ನು ಹೊಂದಿದ್ದರು.
ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.೧೯ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್‌ಗೆ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದಳು. ಈಕೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್ ಬೆಡ್ ರೂಮಿನಲ್ಲಿ ಜತೆಯಾಗಿ ಇದ್ದಾಗಲೇ ಬರ್ಬರವಾಗಿ ಕೊಂದು ಪರಾರಿ ಆಗಿದ್ದ. ನಂತರ ಶೋಭಾ ಮಗಳು ತಾಯಿಗೆ ಎಷ್ಟು ಬಾರಿ ಫೋನ್ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡು, ಮನೆಗೆ ಬಂದು ನೋಡಿದಾಗ ತಾಯಿ ನಗ್ನ ಸ್ಥಿತಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದು ಕಣ್ಣಿಗೆ ಬಿದ್ದಿತ್ತು. ಆ ಪ್ರಕರಣವು ಬೆಳಕಿಗೆ ಬಂದಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.