ಕರುಣೇಶ್ವರ ನಗರ: ಅದ್ದೂರಿಯಾಗಿ ಜರುಗಿದ ಶ್ರೀಹನುಮಜಯಂತಿ
ಕಲಬುರಗಿ,ಏ.23- ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕರುಣೇಶ್ವರ ನಗರದ ಬೃಂದವನ ಕಾಲೋನಿಯಲ್ಲಿ ಆಯೋಜಿಸಿದ್ದ 23ನೇ ಹನುಮ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀಜೈಹನುಮಾನ ಜಯಂತೋತ್ಸವ ಅಂಗವಾಗಿ ಬೆಳಿಗ್ಗೆ ಅಭಿಷೇಕ, ಕುಂಕುಮ ಅರ್ಚನೆ, ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ ಆಲಮೇಲ ಪೂಜ್ಯ ರಾಮಚಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವ ದರ್ಶನ ಪಡೆದರು.
ಮಹಿಳಾ ಭಕ್ತರು ಶ್ರೀಬಾಲಹನುಮಾನ ತೊಟ್ಟಿಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಅರ್ಚಕರಾದ ಭಗವಂತ ಸುತ್ತರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗೋಪಾಲ ದೊಡ್ಮನಿ, ಮಹಾದೇವಪ್ಪ ಅಂಗಡಿ, ಮನೋಹರ ಪೋತ್ತಾದಾರ, ರಘುವೀರ ಕುಲಕರ್ಣಿ. ವೀರಣ್ಣ ಮಾಲಿಪಾಟೀಲ, ಚನ್ನಣ್ಣ ಸುರಪುಕರ್, ಬಸವರಾಜ ದೇವತಕಲ್, ಶಾಂತಪ್ಪ ಘೂಳಿ, ರಾಜಶೇಖರ ಹವಲ್ದಾರ, ಸಿದ್ದಣ್ಣ ಹೂಗಾರ, ಶಿವರಾಜ ಪಾಟೀಲ, ಮೌನೇಶ ನಿಂಬಾಳ, ಶಾಂತಪ್ಪ ಹೂಗಾರ, ಗಂಗಾಧರ ಸುತ್ತಾರ, ಶಿವಾನಂದ ಸುತ್ತಾರ, ಗುಂಡಣ್ಣ ಸುತ್ತಾರ, ಈರಣ್ಣ ಸುತ್ತಾರ, ದುಯನಂದ ಸುತ್ತಾರ, ಎಸ್‍ಎಸ್ ಕಟ್ಟಿ ಸೇರಿದಂತೆ ಬಡಾವಣೆಯ ಪ್ರಮುಖರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.