ಹನುಮ ಜಯಂತಿ ಆಚರಣೆ
ಸತ್ತೂರು,ಏ 23 : ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿರುವ ಡಿ.ಕೆ ಜೋಶಿಯವರ ಮನೆಯಲ್ಲಿ ಸರಳವಾಗಿ ಶ್ರೀ ಹನುಮ ಜಯಂತಿ ಉತ್ಸವ ನಿಮಿತ್ತ ಹನುಮಂತ ದೇವರಿಗೆ ತೊಟ್ಟಿಲೋತ್ಸವವು ಸುಮಂಗಲಿಯರಿಂದ ಸಂಭ್ರಮದಿಂದ ಜರಗಿತು.
ಈ ಸಂದಭ9ದಲ್ಲಿ ಕೆ.ವಿ.ಜಿ ಬ್ಯಾಂಕಿನ ನಿವೃತ್ತ ಅಧಿಕಾರಿ ಜಯತೀಥ9 ನಿಲೋಗಲ್ ಅವರು ಅನುಗಾಲವು ಭಗವಂತನಲ್ಲಿ ಹಾಗೂ ಮುಖ್ಯಪ್ರಾಣ ದೇವರಲ್ಲಿ ಅಚಲ ಭಕ್ತಿ ಇರುವಂತೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಎಮ್.ಆರ್ ಕಲಕೋಟಿ, ಹನುಮಂತ ಬಿಜಾಪುರ, ಹನುಮಂತ ಪುರಾಣಿಕ, ಆನಂದ ಬಾಗಲ, ಡಾ. ಶ್ರೀನಾಥ, ವಾಮನ ಭಾದ್ರಿ, ಸಿ.ಕೆ ಕುಲಕರ್ಣಿ, ಭೀಮಸೇನ ದಿಗ್ಗಾವಿ, ರಾಘವೇಂದ್ರ ಮುಂಡಗೋಡ, ಧೀರೇಂದ್ರ ತಂಗೋಡ, ಕೇಶವ ಕುಲಕರ್ಣಿ ಮುಂತಾದ ಕುಟುಂಬದವರು ಉಪಸ್ಥಿತರಿದ್ದರು.