ಡಿಕೆಸು ಪರ ಭರ್ಜರಿ ಪ್ರಚಾರ
ಕನಕಪುರ, ಏ.೨೩-ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಡಿ.ಕೆ. ಸುರೇಶ್‌ರವರು ಕ್ಷೇತ್ರದಲ್ಲಿ ಮಾಡದ ಕೆಲಸಗಳಿಲ್ಲವೆಂದು ನಗರಸಭಾ ಮಾಜಿ ಉಪಾದ್ಯಕ್ಷೆ ಹಾಗೂ ಹಾಲಿ ಸದಸ್ಯರಾದ ಹೇಮರಾಜು ಹೇಳಿದ್ದಾರೆ.
ಅವರು ನಗರದ ೪ನೇ ವಾರ್ಡಿನಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚನೆ ಮಾಡಿ ಮಾತನಾಡಿದರು.
ಸಂಸದರಾಗಿ ದೇಶಕ್ಕೆ ನಂಬರ್ ಒನ್ ಸಂಸದ ಎಂಬ ಬಿರುದನ್ನು ಕೇಂದ್ರ ಸರ್ಕಾರವೆ ನೀಡಿದೆ, ಜನರನಡುವೆ ನಿಂತು ಕೆಲಸ ಮಾಡುವ ವ್ಯಕ್ತಿ ಡಿ.ಕೆ. ಸುರೇಶ್‌ರನ್ನು ಬಿಟ್ಟು ನಮ್ಮ ಕ್ಷೇತ್ರದಲ್ಲದೆ ಇರುವ ವ್ಯಕ್ತಿಗೆ ಮತ ಹಾಕಿ ನಾವು ಏಕೆ ಅವರ ಬಳಿ ಹೋಗೋಣ ಹಾಗಯೇ ನಮ್ಮ ವಿರೋಧಿ ಅಭ್ಯರ್ಥಿ ಯಾವ ಪಕ್ಷಕ್ಕೆ ಸೇರಿದವರೆಂಬ ಗೊಂದಲ ವಿದೆ ಹಾಗಾಗಿ ನಮ್ಮ ನಡುವೆ ಇರುವ ಡಿ.ಕೆ. ಸುರೇಶ್‌ಗೆ ನಮ್ಮ ವಾರ್ಡಿನಲ್ಲಿ ಅತಿ ಹೆಚ್ಚು ಮತದಾನ ಮಾಡುತ್ತೇವೆ ಎಂದಿದ್ದಾರೆ.
ಮಾಜಿ ನಗರಸಭಾ ನಾಮ ನಿದೇಶಿತ ಸದಸ್ಯ ಶಿವಕುಮಾರ್ ಹಾಗೂ ರಾಜ್ಯ ಮಹಿಳಾ ಘಟಕದ ರೋಹಿಣಿ ಪ್ರಿಯ ಮಾತನಾಡಿ ವಾರ್ಡಿನ ಎಲ್ಲಾ ಬೀದಿಗಳಲ್ಲಿ ಕಾಂಕ್ರೀಟ್ ರಸ್ತೆಗಳಾಗಿವೆ, ದಿನದ ೨೪ ಗಂಟೆಗಳಲ್ಲಿ ವಿದ್ಯುತ್ ದೊರೆಯುತ್ತಿವೆ ನಮ್ಮ ನಾಯಕರಾದ ಡಿ.ಕೆ. ಸುರೇಶ್‌ರವರು ಮಾಡಿರುವ ಅಭಿವೃದ್ದಿ ಕೆಲಸಗಳಿಂದ ಯಾವುದೇ ಸಮಸ್ಯೆಗಳಿಲ್ಲವೆಂದರು.
ಮುಖಂಡರಾದ ಸಿ. ರಾಜು ಮಾತನಾಡಿ ಡಿ.ಕೆ. ಸುರೇಶ್‌ರವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ನಮ್ಮ ಜನರು ಇಡೀ ಕ್ಷೇತ್ರದಲ್ಲಿ ಮೆಚ್ಚಿದ್ದಾರೆ. ಕನಕಪುರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ ಡಾ. ಸಿ.ಎನ್. ಮಂಜುನಾಥ್ ರವರು ಒಬ್ಬ ವೈದ್ಯರಾಗಿದ್ದವರು ಅವರ ಮುಖವೆ ನಮಗೆ ಗೊತ್ತಿಲ್ಲ ನರೇಗಾದ ಬಗ್ಗೆ ಅವರಿಗೆ ಏನು ಗೊತ್ತು ಎಲ್ಲಾ ಯೋಜನೆಗಳನ್ನು ತಂದು ಜನರಿಗೆ ಅನುಕೂಲಮಾಡಿಕೊಟ್ಟಿದ್ದಾರೆ. ನಮ್ಮ ವಾರ್ಡಿನ್ ಅಗ್ರಹಾರ ಬೀದಿಯಲ್ಲಿ ಅತ್ಯುತ್ತಮವಾಗಿ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮತಯಾಚನೆಯ ಸಂದರ್ಭದಲ್ಲಿ ಮುಖಂಡರಾದ ಅಕ್ಕಿರಾಮಣ್ಣ, ಕುರಿಯಪ್ಪ, ಟೈಲರ್ ಚಂದ್ರು, ವೆಂಕಟೇಶ್ ರೆಡ್ಡಿ, ಹೊಸಬೀದಿ ಮೋಹನ್, ಸತೀಶ್, ಮುತ್ತುರಾಜು, ಶೇಷಪ್ಪ, ಮದನಗಿರಿ, ನಾಗೇಂದ್ರ, ಪುಟ್ಟಸ್ವಾಮಿ, ಪದ್ಮಾಕೃಷ್ಣಪ್ಪ, ಯಶೋದಾ, ಭಾರತಿ, ಸವಿತಾ, ಸುಶೀಲ, ಆಶಾ, ನಾಗಮ್ಮ, ಟೈಲರ್ ಪದ್ಮ, ಚುರಿಮುರಿ ಮಹೇಶ್, ಗೊಲ್ಲರಸಂಘದ ಅಧ್ಯಕ್ಷ ಸುರೇಶ್, ಅಂಬಪ್ರಾಸ್, ಕೇಬಲ್ ಆನಂದ್ ಸುಬ್ರಹ್ಮಣ್ಯ ಎಲ್ಲಾ ಕಾಂಗ್ರೆಸ್ ಕಾರ್‍ಯಕರ್ತರು ಉಪಸ್ಥಿತರಿದ್ದರು.