ವಿಜಯಪುರ: ನೇಹಾ ಹತ್ಯೆ ಖಂಡಿಸಿ ವಿಎಚ್‍ಪಿ ಪ್ರತಿಭಟನೆ
ಸಂಜೆವಾಣಿ ವಾರ್ತೆ.
ವಿಜಯಪುರ,ಏ.23 :ಹುಬ್ಬಳ್ಳಿಯ ಪ್ರತಿಷ್ಠಿತ ಬಿ.ವಿ.ಬಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಹಿಂದೂ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಜಾಗೃತಿ ನಾಗರಿಕ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ವೃತ್ತದಿಂದ ಪ್ರತಿಭಟನೆ ಮೆರವಣಿಗೆಯಲ್ಲಿ ಹೊರಟ ಜಾಗೃತಿ ನಾಗರಿಕ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಅನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ವಿಭಾಗ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ, ಪ್ರಾಂತ ಪ್ರಮುಖರಾದ ಮಾಯಕ್ಕ ಚೌಧರಿ, ಮಂಚಾಲೇಶ್ವರಿ, ರಾಜು ಗಚ್ಚಿನಮಠ ಮುಂತಾದವರು ಮಾತನಾಡಿ,
ಜಿಹಾದಿ ಭಯೋತ್ಪಾದಕ ಫಯಾಜ್ ಎಂಬ ದುಷ್ಟ ಪ್ರೀತಿ ನಿರಾಕರಿಸಿದ ನೇಹಾಳಿಗೆ ಕಾಲೇಜ್ ಆವರಣದಲ್ಲಿಯೇ ಹಾಡ ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಇಡೀ ಕರ್ನಾಟಕದ ಜನತೆಯಲ್ಲಿ ಆತಂಕವನ್ನು ಹುಟ್ಟಿಸಿದೆ ಈ ಆತಂಕಕ್ಕೆ ಕಾರಣನಾದ ಭಯೋತ್ಪಾದಕ ಫಯಾಜ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ಸಾಲದು. ಫಯಾಜ್‍ನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ತನಿಖೆಗೆ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಗೃಹ ಸಚಿವ ಪರಮೇಶ್ವರ ಅವರು ನಿರ್ಲಕ್ಷದ ಹೇಳಿಕೆ ನೀಡಿರುವುದು ಸರಿಯಲ್ಲ. ಈ ನಿರ್ಲಕ್ಷದ ಹೇಳಿಕೆ ಅಲ್ಪಸಂಖ್ಯಾತ ಮುಸ್ಲಿಂ ಸಮಾಜದ ತುಷ್ಟೀಕರಣದ ನೀತಿಯನ್ನು ಬಿಂಬಿಸುತ್ತದೆ. ಮುಸ್ಲಿಂ ಓಟ್ ಬ್ಯಾಂಕ್ ಒಲೈಕೆಗೆ ನಾಂದಿ ಹಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ತಕ್ಷಣ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಹತ್ಯೆಗೆದ ಹಂತಕ ಫಯಾಜ್‍ನನ್ನು ಗಲ್ಲಿಗೇರಿಸಬೇಕು. ವಿದ್ಯಾರ್ಥಿನಿಯರಲ್ಲಿ ಉಂಟಾದ ಭಯವನ್ನು ದೂರಗೊಳಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅನಂತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ ಓದಿ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ, ಮಹೇಶ ಸಾಲೋಟಗಿ, ಅಶ್ವಿನ್ ಪಟ್ಟಣಶೆಟ್ಟಿ, ಶಿವಾನಂದ ನಾಗರಾ¼,À ಅರ್ಜುನ ಬಡಚಿ, ಈರಣ್ಣ ಹಳ್ಳಿ, ಗೀತಾ ಅಂಗಡಿ, ಜಯಶ್ರೀ ಆಫಜಲಪುರ ಮುಂತಾದವರು ಉಪಸ್ಥಿತರಿದ್ದರು