ತೊಗರಿ ಬೆಳೆಗಾರರಿಗೆ ಸರ್ಕಾರಗಳಿಂದ ದ್ರೋಹ: ರೈತ ಮುಖಂಡರ ಆರೋಪ
ಕಲಬುರಗಿ:ಏ.22:ಕಲ್ಯಾಣ ಕರ್ನಾಟಕ ನಾಡಿನ ತೊಗರಿಯ ನಾಡಿನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಇದೊಂದು ತೊಗರಿ ಬೆಳೆಗಾರರಿಗೆ ದ್ರೋಹ ಬಗೆದಂತಾಗಿದೆ. ಸರ್ಕಾರದ ಜನ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಗರಿ ಕಣಜ ಎಂದು ಖ್ಯಾತಿ ಪಡೆದಿದೆ. ಜಿಲ್ಲೆಯ ತೊಗರಿ ಮಂಡಳಿ ರಚನೆ ಆದ ನಂತರ ಎಸ್.ಎಂ. ಕೃಷ್ಣಾ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ 5 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದು ಬಿಟ್ಟರೆ ಇಲ್ಲಿಯವರೆಗೆ ಒಂದು ನೈ ಪೈಸೆ ಹಣ ಕೊಟ್ಟಿಲ್ಲ. ಬೇರೆ, ಬೇರೆ ಬೋರ್ಡ್ ಮಾತ್ರ ಕಣ್ಣಗೆ ಕಾಣಿಸುತ್ತದೆ. ಆದರೆ ತೊಗರಿ ಬೋರ್ಡ್ ಮಾತ್ರ ಕಾಣಿಸುವುದಿಲ್ಲ. ಆದರೆ ತೊಗರಿ ಬೋರ್ಡ್ ಹೆಸರು ತೆಗೆದು ಹಾಕಿ ಅದಕ್ಕೆ ಇನ್ನೊಂದು ಹೆಸರು ಕೊಟ್ಟು ದ್ವಿದಳ ಧಾನ್ಯಗಳು ಪಲ್ಸೆಸ್ಸ್ ಬೋರ್ಡ್ ಅಂತ ಹೆಸರಿಟ್ಟು ಬೋರ್ಡ್ ಅನಾಥವಾಗಿದೆ ಎಂದರು.
ಹೆಸರಿಗೆ ಮಾತ್ರ ಮಂಡಳಿಯಾಗಿದೆ. ಮಂಡಳಿಯಿಂದ ರೈತರಿಗೆ ಎನು ಲಾಭವಿಲ್ಲದಂತಾಗಿದೆ ಮತ್ತು ಭಿಮಾ ಪಲ್ಸ್ ಅಂತ ಹೇಳಿ ತೊಗರಿ ಬ್ಯಾಳಿ ಲಾಂಚ್ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ತೊಗರಿ ಬ್ಯಾಳಿ ಪ್ಯಾಕೆಟ್ ಲಾಂಚ್ ಮಾಡಿ ತೋರಿಕೆಗೆ ಮಾತ್ರ ಇದಾಗಿದೆ. ಎಲ್ಲಿಯೂ ಸಹ ಭಿಮಾ ಪಲ್ಸ್ ಬ್ಯಾಳಿ ತಯಾರಿಸುವ ಮಷಿನೆರಿ ಇಲ್ಲ. ಕಟ್ಟಡದ ಬಿಲ್ಡಿಂಗ್ ಇಲ್ಲ. ಸುಳ್ಳು ಹೇಳಿ ಈ ಭಾಗದ ಜನರಿಗೆ ದ್ರೋಹ ಬಗೆದಂತಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಈ ಭಾಗದ ತೊಗರಿ ಏಷ್ಯಾ ಖಂಡದ ಹೆಸರಾಂತ ವಾದ ತೊಗರಿ ಕಣಜ ಎಂದು ಖ್ಯಾತಿ ಪಡೆದಿದೆ ತೊಗರಿ ಬೆಳೆಗಾರರ ಹಿತ ಕಾಪಾಡುವುದರಲ್ಲಿ ನಮ್ಮನ್ನು ಆಳುವ ಸರ್ಕಾರಗಳು ತೊಗರಿ ಬೆಳೆಗಾರರಿಗೆ ಕಡೆಗಣಿಸಿದ್ದು ತುಂಬಾ ಖೆದಕರ ಸಂಗತಿಯಾಗಿದೆ. ತೊಗರಿ ಬೋರ್ಡ್ ಬಲಪಡಿಸಿ. ತೊಗರಿ ಪಾರ್ಕ ಏನಾಯಿತು ಜವಳಿ ಪಾರ್ಕ್ ಏನಾಯಿತು ಇದರ ಬಗ್ಗೆ ಯಾಕೆ ಮೌನವಹಿಸಿದ್ದಿರಿ ಬಾಯಿ ಬಿಡಿ ಮಾತಾಡಿ ತೊಗರಿ ಬೆಳೆಗಾರರ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ 2566326 ಜನ ಸಂಖ್ಯೆ ಹೊಂದಿದೆ ಒಟ್ಟು ಜನ ರೈತರ ಸಂಖ್ಯೆ 566400 ಜನ ರೈತರಿದ್ದಾರೆ . ಇದರಲ್ಲಿ ಸಾಲದ ಭಾದೆ ತಾಳಲಾರದೆ 32 ಜನ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ರೈತರ ಗೋಳು ಮುಗಿಲು ಮುಟ್ಟಿದೆ. ಜಿಲ್ಲೆಯಲ್ಲಿ ನಿರಾವಾರಿ ಪ್ರದೇಶ ಕುಂಠಿತವಾಗಿದೆ. ರೈತರ ನಿರಾವಾರಿ ಪ್ರದೇಶ ಹೆಚ್ಚಿಸುವ ದೃಷ್ಟಿಯಲ್ಲಿ ಜಲಾಶಯಗಳು ಹುಟ್ಟು ಹಾಕಲಾಗಿದೆ. ಬೆಣ್ಣೆ ತೋರಾ ಜಲಾಶಯ ಹುಟ್ಟಿ ಸುಮಾರು ವರ್ಷಗಳ ಕಳೆದರು ರೈತರ ಹೊಲಗಳಲ್ಲಿ ನೀರು ಹರಿದಿಲ್ಲ ಮತ್ತು ಕಾಲುವೆ ಮೇನ್ ಕಾಲುವೆ ಮರಿ ಕಾಲುವೆ ಎಡದಂಡೆ ಬಲ ದಂಡೆ ಕಾಲುವೆಗಳು ಹೂಳು ತುಂಬಿ ಹೋಗಿವೆ. ಸ್ವಚ್ಚತೆ ಮಾಡುವ ಹೆಸರಿನಲ್ಲಿ ಕೋಟಿ ಕೋಟಿ ಹಣ ತಿರುಪತಿ ನಾಮ ಹಾಕಿದ್ದಾರೆ. ಇದೆ ರೀತಿ ಗಂಡೊರಿ ನಾಲ ಆಣೆಕಟ್ಟು ಹುಟ್ಟಿದ ದಿನದಿಂದ ಇಲ್ಲಿಯವರೆಗೆ ಕಾಲುವೆಗಳು ಒಡೆದು ಸತ್ಯನಾಸ್ ಆಗಿವೆ. ಅಲ್ಲಲ್ಲಿ ಗೆಟಗಳು ಕೆಟ್ಟು ನಿಂತು ತುಕ್ಕು ಹಿಡಿದಿವೆ. ಯಾರು ದಾದ್ ಇಲ್ಲ ಪೂಕಾರ ಇಲ್ಲ. ಪ್ರತಿಯೊಂದು ದುರಸ್ತಿ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಅದೆ ರೀತಿ ಲೋಹರ್ ಮುಲ್ಲಾಮಾರಿ ಏತ ನಿರಾವಾರಿ ಸಹ ಕೋಟಿ ಕೋಟಿ ರೂ.ಗಳನ್ನು ನುಂಗಿ ನೀರು ಕುಡಿದಿದ್ದಾರೆ. ಭಿಮಾ ನದಿ ಮುಖ್ಯ ಕಾಲುವೆಗಳು ಹಾಳು ಬಿದ್ದು ಹೋಗಿವೆ. ಆಪು ಬೆಳೆದು ಹುಳು ತುಂಬಿವೆ. ಇದರ ಬಗ್ಗೆ ಯಾಕೆ ಜಾಣ ಕುರಡರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಬರಗಾಲದ ಗಂಭೀರ ಉದ್ವಿಗ್ನ ಪರಿಸ್ಥಿತಿ ಎದರಿಸುತ್ತಿರುವ ರೈತರಿಗೆ ಬರ ಪರಿಹಾರದಿಂದ ಯಾಕೆ ವಂಚನೆ ಲಾಗುವಾಡಿ ದುಬಾರಿ ರೈತರು ಕಷ್ಟ ಪಟ್ಟು ಬೆಳೆದು ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅನ್ನದಾತರ ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿ ವರ್ಷ ರೈತರು ಬೆಳೆ ವಿಮೆ ಕಟ್ಟುತ್ತಾರೆ. ಆದರೆ ಬೆಳೆ ವಿಮೆ ಹಣ ಕಟ್ಟಿದ ರೈತರು ತುಳಿತ್ತಕ್ಕೊಳಗಾಗುತ್ತಿದ್ದಾರೆ. ಫಸಲ್ ಭಿಮಾ ಯೋಜನೆ ರೈತರಿಂದ ಹಣ ಸುಲಿಗೆ ಮಾಡುವ ಯೋಜನೆಯಾಗಿದೆ. ಪ್ರತಿ ವರ್ಷ ಕ್ರಾಪ್ ಕಟಿಂಗ್ ಸಮಯದಲ್ಲಿ ಬೆಳೆ ಎಷ್ಟು ಹಾನಿಗೊಳಗಾಗುತ್ತಾರೆ. ಎಷ್ಟು ಬೆಳೆ ಹಾನಿಯಾಗುತ್ತದೆ. ಅದರ ಕಿಮ್ಮತ್ತು ಕಟ್ಟಿ ಆ ಕಿಮ್ಮತ್ತು ಪ್ರಕಾರ ಬೆಳೆ ವಿಮೆ ಹಣ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸಭಾದ ಅಧ್ಯಕ್ಷ ಮೌಲಾ ಮುಲ್ಲಾ, ಅರ್ಜುನ್ ಗೊಬ್ಬೂರ್, ಜಾವೇದ್ ಹುಸೇನ್, ಭೀಮಾಶಂಕರ್ ಮಾಡಿಯಾಳ್ ಮುಂತಾದವರು ಉಪಸ್ಥಿತರಿದ್ದರು.