ಢವಳಗಿ ಬಳಿ ಕಾರ್ ಪಲ್ಟಿ: ಇಬ್ಬರು ಸ್ಥಳದಲ್ಲಿಯೇ ಸಾವು, ಮೂವರಿಗೆ ಗಾಯ
ವಿಜಯಪುರ, ಏ.22:ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹೊರಟಿದ್ದ ಕಾರ್ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೇತಪಟ್ಟು ಮೂವರು ಗಾಯಗೊಂಡ ಘಟನ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಹತ್ತಿರ ಸೋಮವಾರ ನಸುಕಿನ ಜಾವ ನಡೆದಿದೆ.
ದೊಡ್ಡಯ್ಯ ಪುರಾಣಿಕಮಠ (37) ಪುಷ್ಪಾವತಿ ಹಿರೇಮಠ( 55) ಮೃತಪಟ್ಟ ನತದೃಷ್ಟರು.
ಕಳೆದ ನಾಲ್ಕು ದಿನಗಳ ಹಿಂದಯಷ್ಟೇ ಮೃತ ದೊಡ್ಡಯ್ಯ ಪುರಾಣಿಕಮಠ ಸೇನೆಯಿಂದ ಸೇವಾ ನಿವೃತ್ತಿ ಹೊಂದಿದ್ದರು.
ಮೃತರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕರಭಂಟನಾಳ ಗ್ರಾಮದವರು ಆಗಿದ್ದಾರೆ.
ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುದ್ದೇಬಿಹಾಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.