ಸ್ವಯಂಭೂ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿ
ಕಲಬುರಗಿ,ಏ.22-ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಗತ್ ಬಡಾವಣೆಯ ಸ್ವಯಂಭೂ ಹನುಮಾನ ಮಂದಿರದಲ್ಲಿ ಹನುಮಾನ ಜನ್ಮೋತ್ಸವವನ್ನು ಬಹು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
ಏ.22 ರಂದು ಪವಮಾನ ಹೋಮ, 23 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಹನುಮಂತ ದೇವರಿಗೆ ಪಂಚಾಮೃತ ಮತ್ತು ವಿವಿಧ ಫಲಗಳಿಂದ ಅಭಿಷೇಕದ ನಂತರ 6 ಗಂಟೆಗೆ ಹನುಮಂತ ದೇವರಿಗೆ “” ತೊಟ್ಟಿಲುಸೇವಾ ಕಾರ್ಯ ನೆರವೇರಿಸಲಾಗುವುದು. 8:45 ಕ್ಕೆ ಸತ್ಯನಾರಾಯಣ ಸ್ವಾಮಿಯ ವೃತಪೂಜೆಯನ್ನು ಮಾಡಲಾಗುತ್ತದೆ. ಸಾಯಂಕಾಲ 5:30ಕ್ಕೆ ಸ್ವಯಂಭೂ ಹನುಮಂತ ದೇವರ ಪಲ್ಲಕ್ಕಿಯನ್ನು ಭಜನೆ ಸಂಕೀರ್ತನೆಯೊಂದಿಗೆ ಗ್ರಾಮಪ್ರದಕ್ಷಿಣೆಯನ್ನು ನೆರವೇರಿಸಲಾಗುತ್ತದೆ. ನಂತರ ಭಜನೆ ಮತ್ತು ಮಹಾಮಂಗಳಾರತಿ ನಡೆಯಲಿದೆ.
ಈ ಸಂಭ್ರಮದ ಹನುಮಜನ್ಮೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ತಮ್ಮ ತನು ಮನ ಧನದಿಂದ ಸೇವೆಯನ್ನು ಸಲ್ಲಿಸಿ ಸ್ವಯಂಭೂ ಹನುಮಂತ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ಯ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.