ದಾಖಲೆಯಿಲ್ಲದ 50 ಲಕ್ಷ ರೂಪಾಯಿ ನಗದು ವಶಕ್ಕೆ
ವಿಜಯಪುರ,ಏ.22:ಅಕ್ರಮವಾಗಿ ಕಾರ್ ನಲ್ಲಿ ಸಾಗಾಟ ಮಾಡುತ್ತಿದ್ದ 50 ಲಕ್ಷ ರೂಪಾಯಿ ನಗದು ಹಣವನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿ ಪೆÇಲೀಸರು ಹಾಗೂ ಚುನಾವಣೆ ಸಿಬ್ಬಂದಿ ಕಾರ್ ತಪಾಸಣೆ ನಡೆಸಿದ ವೇಳೆ ಸೂಕ್ತ ದಾಖಲೆ ಒದಗಿಸದ ಕಾರಣ 50 ಲಕ್ಷ ನಗದು ಹಾಗೂ ಕಾರ್ ವಶಕ್ಕೆ ಪಡೆಯಲಾಗಿದೆ.
ಬಸವನ ಬಾಗೇವಾಡಿ ತಹಸೀಲ್ದಾರ ಸೋಮನಕಟ್ಟಿ, ಮನಗೂಳಿ ಪಿಎಸ್‍ಐ ಶ್ರೀಕಾಂತ ಕಾಂಬಳೆ ಹಾಗೂ ಎಫ್ ಎಸ್ ಟಿ ತಂಡದಿಂದ ನಗದು ಹಾಗೂ ಕಾರ್ ವಶಪಡಿಸಿಕೊಂಡಿದ್ದಾರೆ.
ಮನಗೂಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.