ಮಹಾವೀರರ ಅಹಿಂಸಾ ತತ್ವ ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪ : ಶಾಸಕ ಲಕ್ಷ್ಮಣ ಸವದಿ
ಅಥಣಿ : ಏ.22:ಭಗವಾನ್ ಮಹಾವೀರರು ಬೋಧಿಸಿದ ಅಹಿಂಸಾ ತತ್ವವು ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪವಾಗಿದೆ. ಸತ್ಯ.ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಜಗತ್ತಿಗೆ ಸಾರಿದವರು ಮಹಾವೀರರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ತಾಲೂಕ ಆಡಳಿತ ಹಾಗೂ ಜೈನ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾವೀರ ತೀಥರ್ಂಕರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜೈನ ಧರ್ಮದಲ್ಲಿ ಭಗವಾನ್ ಮಹಾವೀರರು 24ನೇ ತೀಥರ್ಂಕರರಾಗಿದ್ದು, ಕಠಿಣ ತಪಸ್ಸು ಮಾಡಿ, ಜ್ಞಾನ ಸಂಪಾದಿಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಜೈನ ಧರ್ಮದ ತತ್ವ ಸಿದ್ಧಾಂತಗಳು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಅತ್ಯಂತ ಕಠಿಣವೆನಿಸುತ್ತಿದ್ದರೂ ಸಹ, ಅವುಗಳನ್ನು ಎರಡು ವಿಧವಾಗಿ ಬೋಧಿಸಿ, ಎಲ್ಲರಿಗೂ ನಿಕಟವಾಗುವಂತೆ ಅಣುವ್ರತ ಹಾಗೂ ಮಹಾವ್ರತಗಳನ್ನಾಗಿ ತಿಳಿಸಿರುವುದು ಒಂದು ಜೈನ ಧರ್ಮದ ವಿಶೇಷ. ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಈ ವೇಳೆ ಜೈನ ಸಮಾಜದ ಮುಖಂಡರಾದ ನ್ಯಾಯವಾದಿ ಕೆ ಎ ವಣಜೋಳ ಮಾತನಾಡಿ
ಭಗವಾನ ಮಹಾವೀರ ತೀಥರ್ಂಕರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆ ಬಯಸಿ ತ್ಯಾಗ, ತಪಸ್ಸು ಮಾಡಿದವರು. ಭಗವಾನ್ ಮಹಾವೀರರು ಬೋಧಿಸಿದ ಅಹಿಂಸಾ ಪರಮೋಧರ್ಮ ತತ್ವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಬೆಳೆಯುತ್ತದೆ. ಎಂದರು.
ಪಟ್ಟಣದ ಬುಧವಾರ ಪೀಠ ಜೈನ ಬಸದಿಯಿಂದ ಆರಂಭವಾದ ಮಹಾವೀರ್ ತೀಥರ್ಂಕರ ಭಾವಚಿತ್ರ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವಕ್ಕೆ ತಾಲೂಕ ತಹಶೀಲ್ದಾರ ವಾಣಿ ಯು ಚಾಲನೆ ನೀಡಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ ಕುಮಟಳ್ಳಿ, ಜೈನ ಸಮಾಜದ ಮುಖಂಡರಾದ ಚಂದ್ರಕಾಂತ ಘೋoಗಡಿ, ಅಶೋಕ ಪಡನಾಡ, ಸಂತೋಷ ಬೊಮ್ಮಣ್ಣನವರ, ನಿತಿನ್ ಗೋಂಗಡಿ, ಡಿ. ಡಿ ಮೇಕನಮರಡಿ, ರಾಜು ಕರ್ಪೂರಶೆಟ್ಟಿ, ಗುಂಡು ಇಜಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಟ್ಟಣದ ಬುಧವಾರ ಪೀಠ ಜೈನ ಬಸದಿಯಿಂದ ವಿವಿಧ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತೆ ಜೈನ ಬಸದಿಯಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ನೂರಾರು ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.
ಜೈನ ಧರ್ಮವು ತನ್ನದೆ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಧರ್ಮಕ್ಕಿಂತ ದೊಡ್ಡದು ಮಾನವೀಯತೆ. ಎಲ್ಲರನ್ನೂ ಗೌರವಿಸೋಣ ಹಾಗೂ ಧರ್ಮ, ಜಾತಿ ಭೇದ ಭಾವವಿಲ್ಲದೇ ಎಲ್ಲರೂ ಒಂದಾಗಿ ಇಡೀ ಜಗತ್ತಿಗೆ ಸತ್ಯ. ಅಹಿಂಸೆಯೇ ಮಾರ್ಗ ತೋರಿಸಿದ ಭಗವಾನ್ ಮಹಾವೀರರ ಜಯಂತಿ ಆಚರಿಸೋಣ