ವಚನ ಸಾಹಿತ್ಯಆಧಾರಿತವಾಗಿ ಅನುಭವ ಮಂಟಪದ ಒಳಭಾಗದಲ್ಲಿ ದೃಶ್ಯ ಶ್ರವಣ ಮಾಧ್ಯಮಸಾಹಿತ್ಯ ಅಳವಡಿಕೆಗೆ ಅನುಭವ ಮಂಟಪತಜ್ಞರ ಸಮಿತಿ ಸಭೆ ಸಲಹೆ :ಗೋ.ರು.ಚ
ಬಸವಕಲ್ಯಾಣ :ಏ.22: ನೂತನಅನುಭವ ಮಂಟಪ ಕಾಮಗಾರಿಗಳು ಭರದಿಂದ ಸಾಗಿದ್ದುನಿಗದಿತಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಇದೆಈ ಹಿನ್ನಲೆಯಲ್ಲಿಕಟ್ಟಡದ ಒಳಭಾಗದಲ್ಲಿ ಅನುಭವ ಮಂಟಪವನ್ನು ಸೌಂದರಿಕರಣಗೊಳಿಸಲು 12ನೇ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯಆಧಾರಿತವಾಗ್ಲಿ ದೃಶ್ಯಮತ್ತುಶ್ರವಣ ಮಾಧ್ಯಮ ಕೆಲಸಕ್ಕೆ ಶರಣ ಸಾಹಿತ್ಯ ಅಳವಡಿಕೆಗೆತಜ್ಞ ಸಲಹಾ ಸಮೀತಿಉತ್ತಮಸಲಹೆ ನೀಡಿದೆಎಂದುಡಾ.ಗೋರು.ಚೆನ್ನಬಸಪ್ಪ ಹೇಳಿದರು.
ಎಪ್ರಿಲ 16 ರಿಂದ 18ರ ವರೆಗೆಬಸವಕಲ್ಯಾಣದಲ್ಲಿಅನುಭವ ಮಂಟಪತಜ್ಞರ ಸಮೀತಿ ಸಭೆ ಸೇರಿ ಕಳೆದ 3 ದಿನಗಳಿಂದ ಸಹ ವಿಸ್ತಾರವಾಗಿಚರ್ಚಿಸಿ ಅನುಭವ ಮಂಟಪದಲ್ಲಿಸುಮಾರು 300 ವಚನಗಳು ಅಳವಡಿಕೆ ಮಾಡಲುಅದಕ್ಕೆ ಬೇಕಾದ ವಚನಗಳ ಆಯ್ಕೆ ಮಾಡಿಕೊಡಲಾಯಿತುಅದರಲ್ಲಿ ಸಾಹಿತ್ಯ ಲೋಪವಾಗದಂತೆ ನೋಡಿಕೊಳ್ಳುವುದು ಅಲ್ಲಿ ಪ್ರದರ್ಶಿಸುವ ವಚನಗಳ ಆಯ್ಕೆಮತ್ತು ಶರಣರ ಭಾವಚಿತ್ರಗಳ ಅಳವಡಿಕೆ ದೃಶ್ಯ ಮಾಧ್ಯಮ,ಶ್ರವಣ ಮಾಧ್ಯಮಕುರಿತುಚರ್ಚಿಸಲಾಯಿತು. ಈ ಚರ್ಚೆಯಲ್ಲಿ ಸಮೀತಿಯ ಸದಸ್ಯರುಗಳಾದ ಅರವಿಂದಜತ್ತಿ, ರಂಜಾನದರ್ಗಾ, ವೀರಣ್ಣರಾಜೂರ ಸಾಹಿತಿಗಳು ಧಾರವಾಡ, ಗಂಗಾಂಬಿಕಾ ಪಾಟೀಲ, ವೀರಣ್ಣದಂಡೆ, ಕಾಶಿನಾಥ ಅಂಬುಲಗೆ, ಡಾ.ಅಮರನಾಥ ಸೋಲಪುರೆ, ಬಾಬಾಸಾಹೇಬ ಗಡ್ಡೆಅನುಭವ ಮಂಟಪದ ಶಿಲ್ಪಿ, ಅಶೋಕ ದೊಮಲೂರ, ಟಿ.ಆರ್‍ಚಂದ್ರಶೇಖರ,ಅಶೋಕ ಬರಗುಂಡಿ, ರುದ್ರೇಶಚಿತ್ತೂರ, ಜೈಶ್ರೀ ದಂಡೆ, ಬಿಕೆಡಿಬಿ ಅಭಿಯಂತರರಾದ ಶಿವಕುಮಾರ ತಳವಾಡೆ, ಮುಂತಾದವರು ಭಾಗವಹಿಸಿದರು.
ಇವರೆಲ್ಲರ ಸಲಹೆ ಸಹಕಾರದಂತೆಅನುಭವ ಮಂಟಪದ ಒಳಗಡೆ ಮತ್ತು ಹೊರಗಡೆ ಸಾಹಿತ್ಯದೃಶ್ಯಮತ್ತು ಶ್ರವಣಮಾಧ್ಯಮಗಳು ವಚನ ಸಾಹಿತ್ಯಆಧಾರವಾಗಿಕಟ್ಟಡದಲ್ಲಿಅಳವಡಿಸಲಾಗುತ್ತಿದೆ ಎಂದುತಜ್ಞರ ಸಲಹಾ ಸಮೀತಿಅಧ್ಯಕ್ಷಗೋ.ರು.ಚೆನ್ನಬಸಪ್ಪನವರು ತಿಳಿಸಿದರು.