ನೇಹಾ ಹತ್ಯೆ ಖಂಡನೀಯ: ಸಿದ್ದು ಬಾಲಗೊಂಡ
ಕೊಲ್ಹಾರ: ಏ.22:ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯ ಎಂದು ಪ್ರಗತಿಪರ ರೈತ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಸಿದ್ದಪ್ಪ ಬಾಲಗೊಂಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ಹಮ್ಮಿಕೊಂಡು ಮಾತನಾಡಿದ ಅವರು ಹಾಡುಹಗಲೇ ನೇಹಾ ಎನ್ನುವ ಯುವತಿಯನ್ನ ಬರ್ಭರವಾಗಿ ಹತ್ಯೆ ಮಾಡಿರುವ ಫಯಾಜನನ್ನ ಕ್ರೂರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಡಾ. ಆರ್.ಬಿ ಮಠ ಮಾತನಾಡಿ ಕಾನೂನಿನ ಭಯವೇ ಇಲ್ಲದಂತೆ ಫಯಾಜ ಎನ್ನುವ ಯುವಕ ಹಾಡುಗಲೇ ಈ ರೀತಿಯ ದುಷ್ಕø್ರತ್ಯ ನಡೆಸಿರುವುದು ಖಂಡನೀಯ ಆರೋಪಿ ಫಯಾಜನನ್ನ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭಲ್ಲಿ ಬ್ಯಾಂಕಿನ ಸಿಬ್ಬಂದಿ ಸಹಿತ ಅನೇಕರು ಇದ್ದರು.