ಪರಿಷತ್ತು ನೆಲ, ಜಲ, ಭಾμÉಯ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ: ಸಾಯಿರಾಬಾನು ಖಾನ್
ವಿಜಯಪುರ,ಏ.22:ಕನ್ನಡ ಸಾಹಿತ್ಯ ಪರಿಷತ್ತು ಸನಾತನ ಸಂಸ್ಕøತಿ ಆಚಾರ ವಿಚಾರ, ನಡೆ ನುಡಿ ಸಂಸ್ಕೃತಿ- ಸಂಪ್ರದಾಯ, ವೇಷಭೂಷಣ, ಉಡುಗೆ ತೊಡುಗೆಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಬಿತ್ತುವ ನಿಟ್ಟಿನಲ್ಲಿ ನಿರಂತರವಾಗಿ ವಿನೂತನವಾದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ವಿಶ್ರಾಂತ ಪ್ರಾಚಾರ್ಯೆ ಸಾಯಿರಾಬಾನು ಖಾನ್ ಅಭಿಪ್ರಾಯ ಪಟ್ಟರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ದಿ. ಕುಂತಿದೇವಿ ಚಂದಪ್ಪ ಅಕ್ಕಲಕೋಟ ದತ್ತಿದಾನಿಗಳು, ಸಾಹಿತಿ ರಂಗನಾಥ ಚಂದಪ್ಪ ಅಕ್ಕಲಕೋಟ ಹಾಗೂ ದಿವಂಗತ ನಾರಾಯಣರಾವ ಬಾಬಾಜಿ ಭೋಸಲೆ ದತ್ತಿದಾನಿಗಳು ಮುದ್ದೇಬಿಹಾಳದ ರಾಜೇಂದ್ರ ನಾರಾಯಣರಾವ ಭೋಸಲೆ ಅವರ ದತ್ತಿನಿಧಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ನಿರಂತರ ಪ್ರವಹಿಸುವ ಸಾಹಿತ್ಯವಾಗಲಿ, ಕನ್ನಡ ಸಾಹಿತ್ಯದ ಬೇರುಗಳು ಎಲ್ಲೆಡೆ ಚಾಚಿದ್ದು, ಕನ್ನಡ ನೆಲ, ಜಲ, ಭಾμÉಯ ಉಳಿವಿಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಸಯ್ಯ ಹಿರೇಮಠ ಮಾತನಾಡಿ, ಎಲೆ ಮರೆಯ ಕಾಯಿಯಂತಿರುವ ಜಿಲ್ಲೆಯ ಅನೇಕ ಪ್ರತಿಭಾವಂತ ಕವಿ, ಸಾಹಿತಿಗಳನ್ನು ಗುರುತಿಸುವ ಮೂಲಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ “ಗರತಿಯ ಹಾಡುಗಳು” ಕುರಿತು ಉಪನ್ಯಾಸ ನೀಡಿದ ತಾಳಿಕೋಟೆಯ ಜಾನಪದ ಚಿಂvಕಿ ಶಿವಲೀಲಾ ಮುರಾಳ ಅವರು ಉಪನ್ಯಾಸವನ್ನು ನೀಡಿ, ಜಾನಪದ ಗರತಿ ನಮ್ಮೆಲ್ಲರ ಪ್ರೀತಿಯ, ಆದರ್ಶದ ಸಂಕೇತ ಎಂದರು.
ತನ್ನ ಆಸರಿಕೆ ಬೇಸರಿಕೆಗಳನ್ನು ಮನರಂಜನೆಗಳ ರೂಪಕ್ಕಿಳಿಸಿ, ಕುಟ್ಟುವ, ಬೀಸುವ ಮುಂತಾದ ಹಾಡುಗಳ ಮೂಲಕ ನಮ್ಮೆಲ್ಲರನ್ನು ಎಚ್ಚರಿಸುವ ಕಾರ್ಯ ಮಾಡಿದ ಹೆಗ್ಗಳಿಕೆ ಆಕೆಯದು. “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್”ಎಂಬ ಕವಿರಾಜಮಾರ್ಗಕಾರನ ಮಾತು ಜಾನಪದ ಗರತಿಗೆ ಶಬ್ದಶ: ಹೋಲುತ್ತದೆ ಎಂದರು.
ತ್ರಿಪದಿ ಛಂದಸ್ಸಿನ ಮೂಲಕ ಎಲ್ಲರೂ ಅತ್ಯಂತ ಸರಳ ಹಾಗೂ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಹಾಯಕವಾಗುವ ಅನೇಕ ಜನಪದ ಹಾಡಿನ ತುಣುಕುಗಳನ್ನು ಹಾಡುತ್ತ, ವೇದಿಕೆಗೆ ಮೆರುಗು ತಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಾಗತಿಕ ಶಾಂತಿ ಹಾಗೂ ಸೌಹಾರ್ದತೆ” ಕುರಿತು ಉಪನ್ಯಾಸ ನೀಡಿದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಶ್ವೇತಾ ಮುಲ್ಕಿ ಪಾಟೀಲ ಮಾತನಾಡಿ, ಇಂದು ವಿಶ್ವದ ಎಲ್ಲಾ ಕಡೆಗಳಲ್ಲಿ ಶಾಂತಿ ನೆಲೆಸಬೇಕಾಗಿದೆ. “ವಸುದೈವ ಕುಟುಂಬಕಂ” ಎಂಬಂತೆ ಇಡೀ ವಿಶ್ವವೇ ಒಂದು ಮನೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವ ನಮ್ಮಲ್ಲಿ ಮೂಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಮೂಡಿಬರಲು ಸಾಧ್ಯ ಎಂದರು.
“ಯುದ್ಧ ಮತ್ತು ಶಾಂತಿ” ಇವೆರಡು ಮಾನವನ ಮನಸ್ಸಿನಲ್ಲಿಯೇ ಉದ್ಭವವಾಗುವ ಅಂಶಗಳು ಆ ನಿಟ್ಟಿನಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳು ಇಂದು ಯುದ್ಧವನ್ನು ನಿಲ್ಲಿಸಿ ಶಾಂತಿ ಮಂತ್ರ ಪಠಿಸಿ, ಹೊಂದಾಣಿಕೆಯ ಮನೋಭಾವದೊಂದಿಗೆ ಮುನ್ನಡೆದಾಗ ಮಾತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ವಿಶಿಷ್ಟ ಛಾಪನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಕನ್ನಡ ಪರ ಚಿಂತಕÀ ಸುರೇಶ ಬಿಜಾಪುರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಶ್ರೀಶೈಲ ಮುಲಜಿ ಮಾತನಾಡಿದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷÀ ಹಾಸಿಂಪೀರ ವಾಲೀಕಾರ ಹಾಗೂ ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆಣ್ಣವರ ಇದ್ದರು. ಡಾ. ಮಾಧವ ಗುಡಿ ಸ್ವಾಗತಿಸಿದರು. ಕು. ಸಚಿನ ಸಿದ್ನಾಳ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪೆÇ್ರ. ಸುಭಾಸಚಂದ್ರ ಕನ್ನೂರ, ಎಸ್.ಎಲ್ ಇಂಗಳೇಶ್ವರ, ಮಹೇಶ ಕ್ಯಾತಣ್ಣವರ, ಶಿಲ್ಪಾ ಹಂಜಿ, ಜಯವಂತ ಗುಂಡಿ, ಲತಾ ಗುಂಡಿ, ಕವಿತಾ ಕಲ್ಯಾಣಪ್ಪಗೋಳ, ಶಾಂತಲಾ ಪಾಟೀಲ, ಶಿಲ್ಪಾ ಭಸ್ಮೆ, ಲಕ್ಷ್ಮಿ ಕಾತ್ರಾಳ, ಶಿವಾಜಿ ಮೋರೆ, ಅಣ್ಣುಗೌಡ ಬಿರಾದಾರ, ಸಿದ್ದು ಸಾವಳಸಂಗ, ಸಿದ್ರಾಮಪ್ಪ ಜಂಗಮಶೆಟ್ಟಿ, ಗಂಗೂ ರೆಡ್ಡಿ, ರಾಣಿ ಕದಂ, ಎ.ಎಲ್ ಹಳ್ಳೂರ ಮುಂತಾದವರು ಉಪಸ್ಥಿತರಿದ್ದರು.