ಬೈಕ್ ಏರಿ ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ
ಸೇಡಂ,ಎ,22: ಇಲ್ಲಿನ ತಾಲೂಕು ಪಂಚಾಯಿತಿ ಸಂಭಾಂಗಣದಿಂದ ವಾಸವದತ್ತ ಸಿಮೆಂಟ್ ಕಂಪನಿವರೆಗೆ ಹಾಗೂ ಮರಳಿ ಬಸವೇಶ್ವರ ವೃತ್ತ, ಬಸ್ಟಾಂಡ್ವರೆಗೆ ವಿಭಿನ್ನವಾಗಿ ತಾಲೂಕ ಸ್ವೀಪ್ ಸಮಿತಿ ವತಿಯಿಂದ ದ್ವಿಚಕ್ರ ವಾಹನ ಮೂಲಕ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕ ಸಹಾಯಕ ಮತದಾರರ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ಮತದಾರರ ಜಾಗೃತಿ ಪ್ರತಿಜ್ಞಾವಿಧಿ ಬಸವೇಶ್ವರ ವೃತ್ತದಲ್ಲಿ ಬೋಧಿಸಿದರು.
ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಂವಿಧಾನದ ಹಕ್ಕು ಕರ್ತವ್ಯ ಪಾಲಿಸಿ ಕಡ್ಡಾಯವಾಗಿ ಮತದಾನ ಮಾಡಿ.
ಆಶಪ್ಪ ಪೂಜಾರಿ
ಸಹಾಯಕ ಚುನಾವಣಾಧಿಕಾರಿ ಸೇಡಂ