ಹಾಜಿ ಸರ್ವರ ಉರ್ಸ 24 ರಿಂದ ಪ್ರಾರಂಭ ; ಪಟ್ಟೆದಾರ
ಕಲಬುರಗಿ :ಏ.22: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಪೀರ ಹಜರತ ಹಾಜಿ ಸರ್ವರ ಅವರ ಉರ್ಸ ಅನ್ನು ಪ್ರತಿವರ್ಷದಂತೆ ಈ ವರ್ಷವು ಏ 24 ,25,26,27 ರಂದು ಉರ್ಸ ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾದ ಮುತ್ತವಲಿ ಮಸ್ತಾನ ಅಲಿ ಪಟ್ಟೆದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ,24 ರಂದು ರಾತ್ರಿ 8 ಗಂಟೆಗೆ ಮಸ್ತಾನ ಅಲಿ ಪಟ್ಟೆದಾರ ಅವರ ಮನೆಯಿಂದ ದರ್ಗಾದ ವರೆಗೆ ಗಂಧದ ಮೆರೆವಣಿಗೆ ನಡೆಯಲಿದೆ, 25 ರಂದು ರಾತ್ರಿ 9 ಗಂಟೆಗೆ ದರ್ಗಾದ ಆವರಣದಲ್ಲಿ ದೀಪೆÇೀತ್ಸವ ಹಾಗೂ ಖವಾಲಿ,ಮಿಲ್ಲಾದುನ್ನಬಿ ಕಾರ್ಯಕ್ರಮ ನಡೆಯಲಿದೆ,26 ರಂದು ಬೆಳ್ಳಿಗ್ಗೆ 6 ಗಂಟೆಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ, 27 ರಂದು ಭಾರಿ ಪ್ರಮಾಣದಲ್ಲಿ ಹರಿ ಜಾತ್ರೆ ನಡೆದು ಮಸ್ತಾನ ಅಲಿ ಪಟ್ಟೆದಾರ ಅವರ ಮನೆಗೆ ಮರಳಿ ದೇವರನ್ನು ತರುವದೊಂದಿಗೆ ಉರ್ಸ ಮುಕ್ತಾಯಗೊಳ್ಳಲಿದೆ . ಉರ್ಸನಲ್ಲಿ ಗಡಿಕೇಶ್ವರ ,ಕುಪನೂರ,ಭಂಟನಳ್ಳಿ, ಹೊಡೆಬೀರನಳ್ಳಿ,ಸುಲೇಪೇಟ, ಚಿಂಚೋಳಿ ಸೇರಿದಂತೆ 20 ಕ್ಕೂ ಅಧಿಕ ಗ್ರಾಮದ ಭಕ್ತರು ಪಾಲ್ಗೊಳುತ್ತಾರೆ ಎಂದು ಪಟ್ಟೆದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.