24ರಂದು ರೇಣುಕಾಚಾರ್ಯ ಜಯಂತೋತ್ಸವ ಪ್ರಚಾರಕ್ಕೆ ಚಾಲನೆ
ಕಾಳಗಿ.ಎ.22 : ಪಟ್ಟಣದಲ್ಲಿ ರೇಣುಕಾಚಾರ್ಯ ಜಯಂತೋತ್ಸವ ಸಮಿತಿ ವತಿಯಿಂದ ಮೇ.17 ರಂದು ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತೋತ್ಸವ ನಿಮಿತ್ತವಾಗಿ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ಏ.24ರಂದು ಬುಧವಾರ ವಿವಿಧ ಮಠಾಧಿಶರು ಹಾಗೂ ಮುಖಂಡರ ನೇತೃತ್ವದಲ್ಲಿ ಜಯಂತೋತ್ಸವ ವಾಲ್ ಪೆÇೀಸ್ಟರ್ ಬಿಡುಗಡೆ ಹಾಗೂ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಜಯಂತೋತ್ಸವ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತೋತ್ಸವು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಏ.24ರಂದು ಬುಧವಾರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ರೇವಣಸಿದ್ದೇಶ್ವರ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಜರುಗುವುದು. ನಂತರ ವಿವಿಧ ಮಠಾಧೀಶರ ನೇತೃತ್ವದಲ್ಲಿ ಜಯಂತೋತ್ಸವ ವಾಲ್ ಪೆÇೀಸ್ಟರ್ ಬಿಡುಗಡೆ ಹಾಗೂ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಜಯಂತೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಮಠ, ಜಂಗಮ ಸಮಾಜ ತಾಲೂಕಾಧ್ಯಕ್ಷ ಶರಣು ಸಾಲಿಮಠ, ವೀರಶೈವ ಸಮಾಜ ಅಧ್ಯಕ್ಷ ಜಗಧೀಶ ಮಾಲಿಪಾಟೀಲ, ಶಂಭುಲಿಂಗಯ್ಯ ವಚ್ಚಾ, ಶೇಖರ ಮಾನಶೆಟ್ಟಿ, ಶಿವಕಿರಣ ಪ್ಯಾಟಿಮಠ ಇತರರು ಇದ್ದರು.