ಶ್ರೀ ಜಂಬುನಾಥೇಶ್ವರ ಸ್ವಾಮಿ ಮಹಾ ರಥೋತ್ಸವ
ಸಂಜೆವಾಣಿ ವಾರ್ತೆ
ಹೊಸಪೇಟೆ ಏ22: ನಗರದ ಜಂಬುನಾಥ ಗುಡ್ಡದ ಲೋಹಾದ್ರಿ ನಡುವೆ ಇರುವ ಐತಿಹಾಸಿಕ ಶ್ರೀ ಜಂಬುನಾಥೇಶ್ವರ ಸ್ವಾಮಿ ಮಹಾ ರಥೋತ್ಸವ ಭಾನುವಾರ ಅತ್ಯಂತ ಸಂಭ್ರಮ-ಸಡಗರದಿಂದ ಜರುಗಿತು.
ಶ್ರೀ ಕ್ರೋದಿನಾಮ ಸಂವತ್ಸರದ ಉತ್ತರಾಯಣ ವಸಂತ ಋತು ಚೈತ್ರ ಮಾಸ ಶುಕ್ಲಪಕ್ಷ ತ್ರಯೋದಶಿಯಾದು ಭಾನುವಾರ 5-30ಕ್ಕೆ ನಡೆದ ಮಹಾ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ 8 ಗಂಟೆಗೆ ಮಡಿತೆರನ್ನು ಸಹ ಏಳೆಯಲಾಗಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಸಿದ್ದಾರ್ಥ್ ಸಿಂಗ್ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ, ಹೊಸಪೇಟೆ, ಜಂಬುನಾಥಹಳ್ಳಿ, ಅಮರಾವತಿ, ಸಂಕ್ಲಾಪುರ, ಕಾಕುಬಾಳು, ಕಲ್ಲಹಳ್ಳಿ, ರಾಜಾಪುರ ವೆಂಕಟಗಿರಿ ಬದಾಮಿ, ರಾಣಿಬೆನ್ನೂರು, ಎರೆ ಬೂದಿಹಾಳ್, ಕೊಟ್ಟೂರು, ಹೊಳಗುಂದಿ, ಅನಗವಾಡಿ ಹಾಗೂ ಶ್ಯಾಮನೂರು ಸೇರಿದಂತೆ ವಿವಿಧ ಭಾಗಗಳ ಭಕ್ತರು ಭಾಗವಹಿಸಿದ್ದರು.
@12bc =  ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಹೊಸಪೇಟೆ: ನಗರದ ಶ್ರೀ ಜಂಬುನಾಥೇಶ್ವರ ಸ್ವಾಮಿ ರಥದ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ಪಾರ್ವತಿ ನಗರದ ನಿವಾಸಿ ಚಿತ್ರಗಾರ ರಾಮು (45) ಎಂದು ಗುರುತಿಸಲಾಗಿದೆ. ರಥದ ಗಾಲಿಗೆ ಸನ್ನಿ ಹಾಕುತ್ತಿರುವ ಸಂದರ್ಭದಲ್ಲಿ ಬಾಳೆ ಹಣ್ಣಿನ ಸಿಪ್ಪೆಯನ್ನು ತುಳಿದ ಕಾಲು ಜಾರಿ ರಥದ ಗಾಲಿ ನಡುವೆ ಸಿಲುಕಿ ಸ್ಥಳದಲ್ಲಿ ಸಾವನಪ್ಪಿದ್ದಾನೆ. ರಥ ಕಟ್ಟುವ ಕಾಯಕ ಮಾಡುತ್ತಿದ್ದ ರಾಮು ರಥದಲ್ಲಿ ಸಿಲುಕಿ ಅಸುನೀಗಿರುವುದು ರ್ದುದೈವದ ಸಂಗತಿಯಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ರಥದ ಗಾಲಿ ನಡುವೆ ಬಾಲಕಿ ಕಾಲು ಸಿಕ್ಕಿಹಾಕಿಕೊಂಡು ಗಾಯಗೊಂಡಿದನ್ನು ಇಲ್ಲಿ ಸ್ಮರಿಸಬಹುದು. ಶಾಸಕ ಎಚ್.ಆರ್.ಗವಿಯಪ್ಪ ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.