ಚಿಟಗುಪ್ಪಾಕ್ಕೆ ಹೊಸದಾಗಿ ಬಸ್ ಸೇವೆ ಆರಂಭ ಸ್ವಾಗತಾರ್ಹ:ವೀರಭದ್ರಪ್ಪ ಉಪ್ಪಿನ
ಬೀದರ:ಏ.22:ಬೀದರದಿಂದ ಚಿಟಗುಪ್ಪಾ ತಾಲೂಕು ಕೇಂದ್ರಕ್ಕೆ ಮನ್ನಾ ಎಖೆಳ್ಳಿ ಮಾರ್ಗವಾಗಿ ನೇರವಾದ ಬಸ್ ಸೌಲಭ್ಯ ಇರುವುದಿಲ್ಲವಾದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸು ತ್ತಿದ್ದರು ಅದರ ನಿವಾರಣೆಗಾಗಿ ಈ ಮಾರ್ಗದಲ್ಲಿ ಹೆಚ್ಚಿನ ಎಕ್ಸ ಪ್ರೆಸ್/ ಸಾದಾ ಬಸ್ಸುಗಳನ್ನು ಓಡಿಸ ಬೇಕೆಂದು ಅಭಾವಿವಿ ನೌಕರರ ಒಕ್ಕೂಟದಿಂದ ಅನೇಕ ಬಾರಿ ಮನವಿಯನ್ನು ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿ, ಬೀದರ ಸಾರಿಗೆ ವಿಭಾಗ (ಘಟಕ 1) ದಿಂದ ಈ ಮಾರ್ಗದಲ್ಲಿ ದಿನದಲ್ಲಿ 3 ಬಾರಿ ಸಂಚರಿಸುವ ಒಂದು ಬಸ್ಸನ್ನು ಆರಂಭಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಪಶು ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಸಂತಸ ವ್ಯಕ್ತಪಡಿಸಿದರು.
ಚಿಟಗುಪ್ಪಾ ಬಸ್ ನಿಲ್ದಾಣದಲ್ಲಿ ಹೊಸದಾಗಿ ಆರಂಭಿಸಲಾದ ಬಸ್ಸಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ, ಚಿಟಗುಪ್ಪಾ ನಿಲ್ದಾಣದ ವ್ಯವಸ್ಥಾಪಕ ರಾಜಕುಮಾರ, ನಿರ್ವಾಹಕ ನವನಾಥ, ಚಾಲಕ ಶೌಕತ್ ಅಲಿ, ಶಿಕ್ಷಕ ರಾಜಶೇಖರ ಉಪ್ಪಿನ್, ಫಾರ್ಮಾಸಿಷ್ಟ ಕೇದಾರ ಹಾಗೂ ಅನೇಕ ಪ್ರಯಾಣಿ ಕರು ಹಾಜರಿದ್ದರು