ಹಬೋಹಳ್ಳಿ : ಸಾಲ ಭಾದೆ ವಿಷ ಕುಡಿದು ರೈತ ಆತ್ಮಹತ್ಯೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.22 ಸಾಲ ಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ
ತಾಲೂಕಿನ ಕೇಶವರಾಯನ ಬಂಡಿ ಗ್ರಾಮದ ಸೊಬಟಿ ನಿಂಗಪ್ಪ(60) ಇವರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಈ ವರ್ಷ ಮಳೆ ಇಲ್ಲದೆ ಬೆಳೆ ಕೈ ಕೊಟ್ಟಿರುವುದರಿಂದ ಬ್ಯಾಂಕ್ ನಲ್ಲಿ  70 ಸಾವಿರ  ಸಾಲ ಮಾಡಿಕೊಂಡಿದ್ದರು. ಈ ಪ್ರಕರಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಪಿಎಸ್ಐ ಬಸವರಾಜ್ ಅರ ಬಾವಿ ತಿಳಿಸಿದ್ದಾರೆ