ನೇಹಾ ಹಿರೇಮಠ ಕೊಲೆಗೆ ಬಸವಲಿಂಗ ಶ್ರೀ ಖಂಡನೆ
ಭಾಲ್ಕಿ:ಏ.22: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾನವ ಜನಾಂಗ ತಲೆ ತಗ್ಗಿಸುವಂತೆ ಮಾಡಿದೆ. ಈ ನೀಚ ಕೃತ್ಯ ಯಾರೇ ಮಾಡಿದರು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಖಟಕಚಿಂಚೋಳಿಯ ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ದೇವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಈ ಕೊಲೆ ಪ್ರಕರಣ ಖಂಡನಾರ್ಹವಾಗಿದೆ. ರಾಜ್ಯ ಸರ್ಕಾರ ಇಂತಹ ಕೃತ್ಯದಲ್ಲಿ ತೊಡಗಿದವರಿಗೆ ಕಠಿಣ ಸಂದೇಶ ರವಾನಿಸುವ ಅಗತ್ಯವಿದೆ. ಎಲ್ಲಾ ರೀತಿಯ ಸಾಕ್ಷಾರೂಪದಲ್ಲಿ ಕೊಲೆಯಾಗಿದೆ. ಇದಕ್ಕೇ ಯಾವುದೇ ತನಿಖೆ ನಡೆಸದೇ ತಕ್ಷಣವೇ ಕೊಲಗಾರನ್ನು ಗಲ್ಲಿಗೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.