ಶ್ರೀರಾಮುಲು ಪರ ಮತಯಾಚನೆ ಮಾಡಿದಗ್ರಾಮಾಂತರ ಮಂಡಲದ ಮುಖಂಡರು
(ಸಂಜೆವಾಣಿ ವಾರ್ತೆ)
 ಬಳ್ಳಾರಿ, ಏ.22: ತಾಲೂಕಿನ  ತೆಗ್ಗಿನ ಬೂದಿಹಾಳ ಗ್ರಾಮದಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ   ಬಿ ಶ್ರೀರಾಮುಲು  ಅವರ ಪರವಾಗಿ ಹಾಗೂ ದೇಶದಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಸಮಿತಿ ಸರ್ಕಾರ ರಚನೆಯಾಗಬೇಕೆಂದು ಬಿಜೆಪಿಗೆ ಮತ ನೀಡುವಂತೆ  ಗ್ರಾಮಾಂತರ ಮಂಡಲದ ಮುಖಂಡರು  ಮನೆ,  ಮನೆಗೆ ತೆರಳಿ ಪ್ರಚಾರ ‌ಮಾಡಿ.  ಕರಪತ್ರ ಹಾಗು  ಮೋದಿ ಗ್ಯಾರಂಟಿ ಕಾರ್ಡ ಹಂಚಿದರು.‌
ಈ ಸಂದರ್ಭದಲ್ಲಿ ಪಕ್ಷದ  ರಾಜ್ಯ ಎಸ್. ಟಿ. ಮೋರ್ಚಾ ಉಪಾಧ್ಯಕ್ಷ ಬಿ. ಓಬಳೇಶ್, ಬಳ್ಳಾರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಆರ್. ಮಲ್ಲಿಕಾರ್ಜುನ್ ಗೌಡ ಹಲಕುಂದಿ,  ಜಿಲ್ಲಾ ಕಾರ್ಯದರ್ಶಿ ಡಿ. ಪ್ರಕಾಶ,   ಮುಖಂಡರಾದ ಬಾಣಾಪುರ ಜಗದೀಶ್ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಲೋಕೇಶ್ ರೆಡ್ಡಿ, ಬೋಗರಾಜ್, ಮಂಡಲ ಉಪಾಧ್ಯಕ್ಷಡಿ ಪ್ರತಾಪ್ ರೆಡ್ಡಿ,  ಯುವ ಮೋರ್ಚಾ ಬಳ್ಳಾರಿ ಗ್ರಾಮಾಂತರ ಮಂಡಲ ಅಧ್ಯಕ್ಷ ತಿಮ್ಮಪ್ಪ,  ಭಾಸ್ಕರ ಹನುಮಂತಪ್ಪ ಕಾರ್ಯಕರ್ತರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.