ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ವಿಜೃಂಭಣೆಯಿಂದ ಮಂಗಲಗೊಂಡ ಚೈತ್ರ ಸಪ್ತಾಹ
ಕಲಬುರಗಿ:ಏ.22:ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದ ಲ್ಲಿ ಏ 13 ರಿಂದ 21 ರ ವರೆಗೆ ಜರಗಿದ ಶ್ರೀ ಸಮರ್ಥ ಸದ್ಗುರು ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಸಮರ್ಥ ಸದ್ಗುರು ಶಿವಪ್ರಭು ಮಹಾರಾಜರ ಪುಣ್ಯ ಸ್ಮರಣೋತ್ಸವದ ಚೈತ್ರ ಸಪ್ತಾಹ ಇಂದು ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣದ ವಿಮಲ ಬ್ರಹ್ಮನಿರೂಪಣೆ. ವೀಣಾ ಹಾಗೂ ಗದ್ದುಗೆಗಳ ಪೂಜೆ. ಪಲ್ಲಕ್ಕಿ . ರಥೋತ್ಸವ . ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು.ಈ ಆಧ್ಯಾತ್ಮ ಸಪ್ತಾಹದಲ್ಲಿ ಕರ್ನಾಟಕ. ಮಹಾರಾಷ್ಟ್ರದ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.