ಧರ್ಮ ದೇವರು ಗುರು ಪಿತೃ ಋಣತೀರಿಸುವುದು ಅಸಾಧ್ಯ: ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಏ.22:ಮನುಷ್ಯ ಜೀವನದಲ್ಲಿ ದೇವರ ಗುರು ಧರ್ಮ ಮತ್ತು ಮಾತಾ ಪಿತೃ ಋಣ ತೀರಿಸುವುದು ಕಷ್ಟ ಸಾಧ್ಯವಾದರೂ ಅವಕಾಶ ಸಿಕ್ಕರೆ ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಬೇಮಳಖೇಡ ಹಿರೇಮಠದ ಪೂಜ್ಯ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು ಅವರು ಬೀದರ ತಾಲೂಕಿನ ಶ್ರೀಮಂಡಲದ ಶ್ರೀ ಚಂದ್ರಪ್ಪಾ ಬಿರಾದಾರ ಅವರ ಅಮೃತ ಮಹೋತ್ಸವ ಮತ್ತು ನಾಣ್ಯ ತುಲಾಭಾರÀ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ತಾಯಿ ತಂದೆಯರು ಮಾತನಾಡುವ ದೇವರುಗಳೆಂದು ವೇದ ವೇದಾಂತಗಳು ಹೇಳುತ್ತವೆ. ತಂದೆ ತಾಯಿ ಸೇವೆಯನ್ನು ಮಾಡಿದರೆ ಇನ್ನೊಂದು ದೈವವÀನ್ನು ನೆನೆಯುವುದು ಅವಶ್ಯಕತೆಯಿಲ್ಲ ಏಕೆಂದರೆ ಇವರು ನಿತ್ಯ ಕಾಣುವ ದೈವಗಳು, ಇವರ ಆಶೀರ್ವಾದ ವಿದ್ದರೆ ಜೀವನದಲ್ಲಿ ಏನೆಲ್ಲ ಸಂಪತ್ತನ್ನು ಗಳಿಸಬಹುದು. ಇವರಿಗೆ ಕಡೆಗಣಿಸಿದರೇ ನೀನು ಏಷ್ಟೇ ದೊಡ್ಡವನಾದರೂ ಕೂಡ ವ್ಯರ್ಥವೆಂದು ಹೇಳುತ್ತಾರೆ. ಜೊತೆಗೆ ಧರ್ಮ ದೇವರು ಸದ್ಗುರುಗಳನ್ನು ಗೌರವಿಸುವುದು ಅಷ್ಟೇ ಅವಶ್ಯಕವಿದೆ ಏಕೆಂದರೆ ಮನುಷ್ಯರು ಈ ಧರ್ಮ ದೇವರು ಗುರು ಪಿತೃಗಳ ಕೃಪೆ ಮತ್ತು ಆಶಿರ್ವಾದದಿಂದ ಸುಸಂಸ್ಕøತ, ಸಜ್ಜನ, ಮತ್ತು ಸುಖ ಜೀವನ ನಡೆಸಲು ಸಾಧ್ಯವಿದೆ.
ಚಂದ್ರಪ್ಪ ಬಿರಾದಾರ ಆದರ್ಶ ಬದುಕು ಸವಿಸಿದವರು. ಹರೆಯದಲ್ಲಿ ಧರ್ಮ ಪತ್ನಿಯಾದ ಕಲಾವತಿ ನವರನ್ನು ಕಳೆದುಕೊಂಡು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮತ್ತೊಂದು ವಿವಾಹವಾಗದೇ ವಿದರು ಜೀವನವನ್ನು ಸವೆಸಿದ ಧೀರರು. ಐದು ಜನ ಗಂಡು ಮಕ್ಕಳಿಗೆ ತಾಯಿಯಾಗಿ ತಂದೆಯಾಗಿ ಮಕ್ಕಳನ್ನು ಓದಿಸಿ, ವಿದ್ಯಾವಂತರನ್ನಾಗಿ ಮಾಡಿದ ಮಾದರಿ ತಂದೆ ಇವರ ಪರಿಶ್ರಮದಿಂದ ಉಜ್ವಲ ಬದಕನ್ನು ಸಾಗುತ್ತಿರುವ ಮಕ್ಕಳು ಅವರು ಇಂದು ಸಮಾಜ ಮುಖಿ ಚಿಂತಕರಾಗಿರುವರು. ಚಂದ್ರಪ್ಪ ನವರು ಏಕ ಪತ್ನಿವೃತಸ್ಥ ಧರ್ಮ ಪರಿಪಾಲಕರಾಗಿ ನಡೆಸಿದ ಜೀವನ ಇಂದಿನ ದಿನ ಮಾನಗಳಲ್ಲಿ ಅಪರೂಪವಾಗಿದೆ.
ಸದ್ಗುರುಗಳ ಆಜ್ಞೇಯಂತೆ ಚಂದ್ರಪ್ಪ ನವರ ಹಿರಿಯ ಮಗ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಸೋಮೇಶ್ವರ ಬಿರಾದಾರ ಅವರು ಎಲ್ಲ ಸಹೋದರರ ವಿಶ್ವಾಸಕ್ಕೆ ತೆಗೆದುಕೊಂಡು ತಂದೆ ಚಂದ್ರಪ್ಪ ಬಿರಾದಾರರವರ ಅಮೃತ ಮಹೋತ್ಸವನ್ನು ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದಿಯಾಗಿರುವರು. ಧರ್ಮ ದೇವರು ಗುರು ತಾಯಿ ತಂದೆಯ ಋಣ ತೀರಿಸಲು ಸಾಧ್ಯವಿಲ್ಲದಿದ್ದರೂ ನಿಷ್ಠೆಯಿಂದ ತಂದೆಯ ಸೇವೆಯನ್ನು ಮಾಡುತ್ತ ಅವರನ್ನು ಗೌರವಿಸಿದ ಕಾರ್ಯ ಸ್ತುತ್ಯಾರ್ಹ ಮತ್ತು ಪ್ರೇರಣಾತ್ಮಕ ಮಹಾನ್ ಕಾರ್ಯವಾಗಿದ್ದು ಇದರಂತೆ ಮುಂದೊಂದು ದಿನ ಚಂದ್ರಪ್ಪ ನವರ ಜನ್ಮ ಶತಮಾನೋತ್ಸವವನ್ನು ಆಚರಿಸುವ ಸೌಭಾಗ್ಯ ಮಕ್ಕಳಿಗೆ, ಪರಿವಾರದವರಿಗೆ ದೊರೆಯಲೆಂದು ಶ್ರೀಗಳು ಹಾರೈಸಿದರು. ಖ್ಯಾತ ಹಾಸ್ಯನಟ ವೈಜಿನಾಥ ಬಿರಾದಾರ, ಪ್ರೊ. ಶಿವಕುಮಾರ ಉಪ್ಪೆ ಅಭಿನಂದನ ನುಡಿಗಳನ್ನಾಡಿದರು. ಶ್ರೀಮಂಡಲದ ಪೂಜ್ಯ ಶ್ರೀಗಳು ಸಮ್ಮುಖವನ್ನು ವಹಿಸಿದರು, ರಾಜೇಂದ್ರಕುಮಾರ ಗಂದಗೆ (ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಬೀದರ ಹಾಗೂ ರಾಜ್ಯ ಉಪಾಧ್ಯಕ್ಷರು, ಗ್ರಾಮ ಪಂಚಾಯತ ಅಧ್ಯಕ್ಷರಾದ ಗುಣಶೆಟ್ಟಿ ಮಂಜುನಾಥ, ಹಿರಿಯರಾದ ಕಾಶಿನಾಥರಾವ ಪಾಟೀಲ ನಿಟ್ಟೂರ, ಶಿವರಾಯ ಮುದಾಳೆ ಮಾಸಿಮಾಡ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ವ್ಯವಸ್ಥೆನ್ನು ಮಾಡಿದ ರಾಜಕುಮಾರ ಸಜ್ಜನಶೆಟ್ಟಿ ಬುಧೇರಾ, ಬಸವರಾಜ ಶಿವರಾಜ ಬಿರಾದಾರ, ಜಗನ್ನಾಥ ಮೋಗಡಂಪಳ್ಳಿ ಬುಧೇರಾ, ಕುಬೇಂದ್ರಪ್ಪ ಗೌಡರು ಚಿತ್ರದುರ್ಗ, ಖ್ಯಾತ ಉದ್ಯಮಿ ಶಾಂತಕುಮಾರ ಮುದಾಳೆ, ಬಾಬುರಾವ ಪಾಟೀಲ್ ತೇಗಂಪೂರ, ಶಿವಕುಮಾರ ಪಾಟೀಲ ತೇಗಂಪೂರ, ಚಂದ್ರಪ್ಪನವರ ಸುಪುತ್ರರಾದ, ಲೀಲಾವತಿ ಸೋಮೇಶ್ವ ಬಿರಾದಾರ, ವಿಜಯಲಕ್ಷ್ಮೀ ಸಂಗಶಟ್ಟಿ ಬಿರಾದಾರ, ಡಾ|| ಸುರೇಖಾ ಭಗವಾನ ಬಿರಾದಾರ, ಉಲ್ಪಾವತಿ ಶಾಂತಕುಮಾರ ಬಿರಾದಾರ, ವಿಜಯಲಕ್ಷ್ಮೀ ಪ್ರಭಾಕರ ಬಿರಾದಾರ, ಅಶ್ವಿನಿ ಶಿವಾನಂದ ಔರಾದೆ ಸಾಯಿನಾಥ ಪಾಟೀಲ್ ನಿಟ್ಟೂರ, ಹಾವಗೀರಾವ ಮುದಾಳೆ, ಶಿವಶಂಕರ ಕಾಮಶೆಟ್ಟೆ ಇಂಜಿನೀಯರ್ ಮುಂತಾದ ನೂರಾರು ಗಣ್ಯರು, ಸಾವಿರಾರೂ ಹಿತೈಷಿ ಬಂಧು ಬಳಗ ಉಪಸ್ಥಿತರಿದ್ದರು.
ಸೋಮೇಶ್ವರ ಬಿರಾದಾರ ಸ್ವಾಗತಿಸಿದರು, ಕು. ಸ್ವರೂಪಾ ಪಾಟೀಲ್ ನಿಟ್ಟೂರ (ಬಿ) ಪ್ರಾರ್ಥನಗೀತೆ ಹೇಳಿದರು. ವಿರಶೆಟ್ಟಿ ಮಾಹಾರಾಜವಾಡೆ ನಿರೂಪಿಸಿದರು.